Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಅಂಟಾರ್ಟಿಕ ಭಾಗದಲ್ಲಿ ವಿಶ್ವದ ಅತಿದೊಡ್ಡ ಹಿಮಗಡ್ಡೆ ಕುಸಿತ

localview news

ಅಂಟಾರ್ಟಿಕ್ :ಸಮುದ್ರಕ್ಕೆ ಜಾರಿಬಿತ್ತು ವಿಶ್ವದ ಅತಿದೊಡ್ಡ ಹಿಮಗಡ್ಡೆ ದೆಹಲಿಗಿಂತಲೂ ಮೂರು ಪಟ್ಟು ದೊಡ್ಡದಿದೆ ಅಳತೆ.ಯುರೋಪಿಯನ್ ಸ್ಪೇಸ್ ಏಜೆನ್ಸಿ ನಡೆಸಿದ ಅಧ್ಯಯನದ ಪ್ರಕಾರ ಅಂಟಾರ್ಟಿಕ ಭಾಗದಿಂದ ತುಂಡಾದ ಹಿಮಗಡ್ಡೆ ಇದೀಗ ವೆಡೆಲ್ ಸಮುದ್ರದಲ್ಲಿ ತೇಲುತ್ತಿದ್ದು ಅದರ ಗಾತ್ರ ನ್ಯೂಯಾರ್ಕ್ ನಗರಕ್ಕಿಂತ ನಾಲ್ಕು ಪಟ್ಟು ದೊಡ್ಡದಿದೆ .

ಅದನ್ನೇ ನಮ್ಮ ಭಾರತದ ರಾಜಧಾನಿ ದೆಹಲಿಯ ಗಾತ್ರಕ್ಕೆ ಹೋಲಿಸಿದರೆ ಸುಮಾರು ಮೂರು ಪಟ್ಟು ದೊಡ್ಡದಾಗಿದೆ . ಈ ಹಿಮಗಡ್ಡೆಗೆ ವಿಜ್ಞಾನಿಗಳು ಎ -76 ಎಂದು ನಾಮಕರಣ ಮಾಡಿದ್ದು , ಇತ್ತೀಚೆಗಷ್ಟೇ ಕೋಪರ್ನಿಕಸ್ ಸೆಂಟಿನೆಲ್ - 1 ಉಪಗ್ರಹದ ಮೂಲಕ ತೆಗೆಯಲಾದ ಚಿತ್ರದಿಂದ ಇದು ಬೆಳಕಿಗೆ ಬಂದಿದೆ.ಕಳೆದ ಬಾರಿ ಎ -68 ಎ ಎಂಬ ಹಿಮಗಡ್ಡೆಯನ್ನು ವಿಶ್ವದ ದೊಡ್ಡ ಹಿಮಗಡ್ಡೆ ಎಂದು ಗುರುತಿಸಲಾಗಿತ್ತು