ಪೊಲೀಸಪ್ಪನ್ ಕೋರೊನಾ ಸಾಂಗಗೆ ಸಾರ್ವಜನಿಕರು ಪಿದಾ
ಬೆಳಗಾವಿ: ಜನರಲ್ಲಿ ಕೋರೊನಾ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ, ಸಂಘ ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ.
ಇದೀಗ ಜಿಲ್ಲೆಯ ವಾರಿಯರ್ಸ್ ಆದ ಪೊಲೀಸರು ಕೂಡ ಪ್ರಯತ್ನ ನಡೆಸಿದ್ದಾರೆ. ಆದರೆ ಇಲ್ಲೊರ್ವ ಪೊಲೀಸಪ್ಪ ತಮ್ಮದೇ ಶೈಲಿಯಲ್ಲಿ ಸಿನಿಮಾ ಗೀತೆಯನ್ನು ಕೋರೊನಾ ಜಾಗೃತಿ ಗೀತೆ ಮಾಡಿ ಹಾಡಿದ್ದಾನೆ. ಅಷ್ಟಕ್ಕೂ ಅದು ಎಲ್ಲಿ ? ಯಾವ ಠಾಣೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೀವು ಒದಲೇಬೇಕು.
ಗಡಿನಾಡು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣೆಯ ಸಿಬ್ಬಂದಿ ಆರ್.ಎಂ.ಮುಲ್ಲಾ ಲಾಕ್ ಡೌನ್ ವೇಳೆಯಲ್ಲಿ ಮನೆಯಲ್ಲಿ ಕುಳಿತ ಜನರನ್ನು ಕೋರೊನಾ ಗೀತೆ ಹಾಡುವ ಮೂಲಕ ಅವರಿಗೆ ಮನರಂಜನೆ ನೀಡಿದ್ದಾನೆ. ನಾವಿರುವುದು ನಿಮಗಾಗಿ, ವೈದ್ಯರು ಇರುವುದು ನಮಗಾಗಿ, ಕೈಯನು ತೊಳೆಯಿರಿ, ಮಾಸ್ಕನು ಧರಿಸಿರಿ, ಬಾಳುವಿರೆಲ್ಲಾ ಹಾಯಾಗಿ... ಬಾಳುವಿರೆಲ್ಲಾ ಹಾಯಾಗಿ... ಎಂದು ಕೋರೊನಾ ಜಾಗೃತಿಯ ಗೀತೆಯನ್ನು ಹಾಡಿದ್ದಾನೆ. ಪೊಲೀಸಪ್ಪನ ಜಾಗೃತಿ ಗೀತೆಗೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಶಿಗಿಹಳ್ಳಿ ಅಭಿನಂಧನೆ ಸಲ್ಲಿಸಿದ್ದು. ಜನರು ಅನಾವಶ್ಯಕವಾಗಿ ಅನಾವಶ್ಯಕವಾಗಿ ಹೊರಗೆ ಬರಬೇಡಿ, ಮನೆಯಲ್ಲಿಯೇ ಇರಿ. ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಒಟ್ಟಾರೆಯಾಗಿ ನೇಸರಗಿ ಪೊಲೀಸ ಠಾಣೆಯ ಸಿಂಬ್ಬಂದಿಗಳ ಕಾರ್ಯಕ್ಕೆ ಜನರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.