ಕೊರೋನಾ ಕಟ್ಟಿ ಹಾಕಲು ಬಿಜೆಪಿ ಕಾರ್ಯಕರ್ತರ ಜನ ಸೇವೆ ಮಾಡಲಿದ್ದಾರೆ: ಸಂಜಯ ಪಾಟೀಲ
ಬೆಳಗಾವಿ: ಕರೊನಾ ಮಹಾಮಾರಿ ಕಟ್ಟಿಹಾಕಲು ಬಿಜೆಪಿ ಕಾರ್ಯಕರ್ತರು ಗ್ರಾಮೀಣ ಮಟ್ಟದಲ್ಲಿ ಸೇವಾ ಕಾರ್ಯಮೂಲಕ ಜನಸಾಮಾನ್ಯರ ಸೇವೆ ಮಾಡಲಿದ್ದಾರೆ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಸೋಮವಾರ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜಿಪಿ ಪದಾಧಿಕಾರಿಗಳ ವರ್ಚುವಲ್ ಸಭೆಯಲ್ಲಿ ಮಾತನಾಡಿ, ಕಳೆದ ಐದಾರು ದಿನಗಳಿಂದ ಕೊವಿಡ್ ಸೊಂಕಿತರ ಸಂಖ್ಯೆ ಇಳಿಮುಖವಾಗಿದ್ದರು ಗ್ರಾಮೀಣ ಪ್ರದೇಶದ ಜನರಲ್ಲಿರುವ ಕೊವಿಡ್ ಭಯದಿಂದ ಮುಕ್ತಿ ಮಾಡಲು ಕಾರ್ಯಕರ್ತರು ವೈದ್ಯರು ಸೇರಿ ಪ್ರತಿ ಮನೆಗಳಲ್ಲಿರುವ ಜನರ ವೈದ್ಯಕೀಯ ತಪಾಸಣೆ ಮಾಡುವದು ಅವಶ್ಯಕತೆ ಇದ್ದರೆ ಉಚಿತ ಮೆಡಿಸಿನ್ ಹಾಗೂ ಸಲಹೆ ಸೂಚನೆಗಳನ್ನು ನೀಡವದಾಗಬೇಕೆಂದರು.
ಬಡ ಜನತೆಯ ದಿನ ನಿತ್ಯದ ಜೀವನಕ್ಕೆ ತೊಂದರೆಯಾಗದಂತೆ ಕಿಟ್ ವಿತರಣೆಗೆ ಕೈಗೊಳ್ಳುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಜಿಲ್ಲೆಯಲ್ಲಿ ಕೊವಿಡ್ ಸೊಂಕಿತರಿಗೆ ಹೆಚ್ಚಿನ ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲು ಕೈಗೊಂಡ ಕ್ರಮದಿಂದ ಇಂದು ಜಿಲ್ಲೆಯಾಧ್ಯಂತ ಬೆಡ್ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಯಾಗಿವೆ. ಆಕ್ಸಿಜನ್ ಪ್ಲಾಂಟ್ ಗಳು ಸ್ಥಾಪನೆಗೆ ಸಮರೊಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಇಂದು ರೆಡ್ ರಿಸೀವರ್ ಹಾಗೂ ಆಕ್ಸಿಜನ್ ಕೊರತೆ ಇಲ್ಲ ಎಂದರು. ಜಿಲ್ಲೆಯಲ್ಲಿ ಕೊವಿಡ್ ಬಗ್ಗೆ ಪಕ್ಷದ ಕಾರ್ಯಕರ್ತರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದರೆ ಬಿಜೆಪಿ ಶಾಸಕರು ಮಾಜಿ ಶಾಸಕರು ಕಾರ್ಯಕರ್ತರಿಗೆ ಬೆಂಗಾವುಲರಾಗಿದ್ದಾರೆ. ಬೈಲಹೊಂಗಲ ಕಿತ್ತೂರು ಕ್ಷೇತ್ರಗಳಲ್ಲಿ ಈಗಾಗಲೇ ಉಚಿತವಾಗಿ ಮೆಡಿಸಿನ್ ಕಿಟ್ ಹಂಚಿದ್ದಾರೆ.
ಗ್ರಾಮೀಣ ಕ್ಷೇತ್ರದಲ್ಲಿ ಉಚಿತ ಐಸೋಲೆಶನ್ ಸೆಂಟರ್,ಜಿಲ್ಲಾ ವೈದ್ಯಕೀಯ ಪ್ರಕೊಷ್ಠಾ ಸಂಚಾಲಕ ಡಾ.ಗುರು ಕೋತಿನ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ ನೇತೃತ್ವದಲ್ಲಿ ಅವಶ್ಯಕ ಮೆಡಿಸಿನ್ ಕಿಟ್ ವಿತರಿಸಲು ನಿರ್ಧರಿಸಿದ್ದಾರೆ.
ಜಿಲ್ಲೆಯಲ್ಲಿ ಕೊವಿಡ್ ಮೃತರ ಉಚಿತ ಅಂತ್ಯ ಸಂಸ್ಕಾರಕ್ಕೆ ಬಿಜೆಪಿ ಕಾರ್ಯಕರ್ತರ ತಂಡವೆ ಸಿದ್ದವಾಗಿದ್ದು ಹಗಲಿರಳು ಮಾಡುತ್ತಿರುವ ಕಾರ್ಯ ಜನಸಾಮನ್ಯರು ನಿಟ್ಟುಸಿರು ಬಿಡುವಂತಾಗಿದೆ ಎಂದರು ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೋಹಿತೆ, ಸುಭಾಷ್ ಪಾಟೀಲ, ಸಂದೀಪ್ ದೇಶಪಾಂಡೆ, ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ನೀತಿನ ಚೌಗಲೆ, ವೀರಭದ್ರ ಪೂಜಾರ, ಮಾರುತಿ ಕೊಪ್ಪದ, ಬಿ.ಎಫ್.ಕೊಳದೂರ, ಬಸವರಾಜ ಹೀರೆಮಠ, ಜ್ಯೋತಿ ಕೊಲ್ಹಾರ, ಮಹಾಂತೇಶ ಪಂಚನ್ನವರ, ಗುಂಡು ತೊಪಿನಕಟ್ಟಿ, ಲಕ್ಕಪ್ಪ ಕಾರ್ಗಿ, ಮಲ್ಲಿಕಾರ್ಜುನ ದೇಸಾಯಿ, ಮಹಾಂತೇಶ ಕುಡಚಿ, ಬಸವರಾಜ ಮಾಳೇದವರ, ಸುನೀಲ ಮಡ್ಡಿಮನಿ ಹಾಗೂ ಜಿಲ್ಲೆಯ ಮಂಡಳ ಪದಾಧಿಕಾರಿಗಳು ಉಪಸ್ಥಿತರಿದ್ದರು