Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವ್ಯಾಕ್ಸಿನೇಶನ್, ಕೊರೋನಾ ಪರೀಕ್ಷೆ ಪ್ರಮಾಣ ಹೆಚ್ಚಿಸಿ - ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ: ಕೊರೋನಾ ಪರೀಕ್ಷೆ ಮತ್ತು ವ್ಯಾಕ್ಸಿನೇಶನ್ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕು. ಜನರು ಭಯಪಡದೆ ವ್ಯಾಕ್ಸಿನೇಶನ್ ಮಾಡಿಸಿಕೊಳ್ಳಬೇಕು. ನಿರ್ಲಕ್ಷ್ಯ ಮಾಡದೆ ಕೊರೋನಾ ಪರೀಕ್ಷೆ ಮಡಿಸಿಕೊಳ್ಳಬೇಕು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕರೆ ನೀಡಿದ್ದಾರೆ.

ಗುರುವಾರ ಕ್ಷೇತ್ರದ ಉಚಗಾಂವ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದ ಅವರು, ಕೊರೋನಾ ಸೋಂಕಿನಿಂದಾಗಿ ಜನರು ಭಯಭೀತರಾಗಿದ್ದಾರೆ. ಯಾರೂ ಭಯಪಡಬೇಕಿಲ್ಲ. ಆದರೆ ಸೂಕ್ತ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.

ಗ್ರಾಮದಲ್ಲಿ ದಿನಕ್ಕೆ 50 ಜನರಿಗೆ ವ್ಯಾಕ್ಸಿನೇಷನ್‌ ಹಾಗೂ 8-10 ಜನರ ಗಂಟಲು ದ್ರವಗಳ ಮಾದರಿಯನ್ನು ಸಂಗ್ರಹಿಸುತ್ತಿದ್ದು, ಇದನ್ನು ಇನ್ನಷ್ಟು ಹೆಚ್ಚಿಸಬೇಕು.

ಮನೆ ಮನೆಗಳಿಗೆ ತೆರಳಿ ಗಂಟಲು ದ್ರವಗಳ ಮಾದರಿಯನ್ನು ಪಡೆಯಬೇಕು ಎಂದು ಹೆಬ್ಬಾಳಕರ್ ಅಧಿಕಾರಿಗಳಿಗೆ ಸೂಚಿಸಿದರು.