Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಐನಾಪುರ ಏತ ನೀರಾವರಿ ಯೋಜನೆಯ ಎರಡನೇ ಸ್ಟೇಜಿನ ಪಂಪ್ಸೆಟ್ಗಳಿಗೆ ಚಾಲನೆ

localview news

ಬೆಳಗಾವಿಇವತ್ತು ಕಾಗವಾಡ ಮತಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ರಾಜ್ಯ ಸರ್ಕಾರದ ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಫಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶ್ರೀಮಂತ (ತಾತ್ಯಾ) ಪಾಟೀಲ ಅವರ ಆದೇಶದ ಮೇರೆಗೆ ಪ್ರತಿ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ ಪ್ರಾರಂಭವಾಗುತ್ತಿದ್ದ ಕೆನಾಲ್ ನೀರನ್ನು ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಈ ವರ್ಷ ಮೇ ತಿಂಗಳಲ್ಲಿ ಪ್ರಾರಂಭಿಸಲಾಗಿದೆ. ಈ ಏತ ನೀರಾವರಿಯಿಂದ ಹಲವಾರು ಗ್ರಾಮಗಳಿಗೆ ಅನುಕೂಲವಾಗಲ್ಲಿದು ಸಚಿವರ ಅನುಪಸ್ಥಿತಿಯಲ್ಲಿ ಇಂದು ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗವನ್ನು ತೊರೆದು ಕೋರೋನಾ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿರುವ ಮಂಗಸೂಳಿ ಗ್ರಾಮದ ಖ್ಯಾತ ವೈದ್ಯರಾದ ಡಾ. ಯುವರಾಜ ಪಾಟೀಲ್ ಡಾ. ಸುರೇಶ್ ನಾಯಕ್. ಡಾ ಗಿರೀಶ್ ಪೋತದಾರ ಇವರ ಶುಭ ಹಸ್ತದಿಂದ ಐನಾಪುರ ಏತ ನೀರಾವರಿ ಯೋಜನೆಯ ಪಂಪ್ಸೆಟ್ ಗೆ ಪೂಜೆ ಸಲ್ಲಿಸಿ ಆರಂಭಿಸಿ, ಕಾಲುವೆ ಮುಖಾಂತರ ನೀರು ಹರಿಸಲಾಯಿತು.

ಈ ಸಮಯದಲ್ಲಿ ಮುಖಂಡರಾದ ಶ್ರೀ ಅಭಯ ಪಾಟೀಲ, ಶ್ರೀ ಮುಕುಂದ್ ಪೂಜಾರಿ , ಶ್ರೀ ಪುಂಡಲೀಕ ಪಾಟೀಲ, ಶ್ರೀ ಬಾಬಾ ಪಾಟೀಲ,ಶ್ರೀ ಚಿದಾನಂದ್ ಮಗದುಮ.ಶ್ರೀ ಅಮೀರ್ ಶೇಕ್,ಶ್ರೀ ಮುರಳಿ ಪಟ್ಟೊಳೆ,ಶ್ರೀ ರಾಜು ನಾಯ್ಕ್ .ಶ್ರೀ ದೊಂಡಿ ರಾಮ ವಾಗ್ಮೊಡೆ.ಶ್ರೀ ಗೌತಮ್ ಗುಂಜಲೆ.ಹಾಗೂ ಇಲಾಖೆಯ ಸಹಾಯಕ ಕಾರ್ಯನಿರ್ವಕ ಎಂಜಿನಿಯರಾದ ಶ್ರೀ ಕೆ ರವಿ, ಶ್ರೀ ಪ್ರವೀಣ್ ಹುಂಚಿಕಟ್ಟೆ ಶ್ರೀ ಸಾಗರ್ ಜಾಧವ್ ಸಚಿವರ ಆಪ್ತ ಸಹಾಯಕರಾದ ಶ್ರೀ ಸಚಿನ ದೇಸಾಯಿ, ಹಾಗೂ ಹಲವಾರು ಮುಖಂಡರು,ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.