Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ನಾಳೆ ಪ್ರಧಾನಿ ಮೋದಿ2.0 ಸರಕಾರಕ್ಕೆ 2ವರ್ಷ:ಬಿಜೆಪಿ ಕಾರ್ಯಕರ್ತರ ಸೇವಾಕಾರ್ಯ: ಪಾಟೀಲ

localview news

ಬೆಳಗಾವಿ : ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಮೇ30ಕ್ಕೆ ಏರೆಡು ವರ್ಷ ಪೂರ್ಣವಾಗಲಿದ್ದು ಯಾವುದೆ ಆಡಂಬರದ ಉತ್ಸವ ಮಾಡದೆ ಕೊವಿಡ್ ಸಂಕಷ್ಟದಲ್ಲಿರುವವರಿಗೆ ಜಿಲ್ಲೆಯಾಧ್ಯಂತ ಪ್ರಧಾನಿಗಳ ಘೋಷಣೆಯಂತೆ ಸೇವಾ ಹಿ ಸಂಘಟನಾ ಅಡಿಯಲ್ಲಿ ಸೇವಾಕಾರ್ಯ ಹಮ್ಮಿಕೊಳ್ಳಲಿಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಕಾರ್ಯಕರ್ತರಿಗೆ ಕರೆ ಕೊಟ್ಟರು. ಶನಿವಾರ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ವರ್ಚುವಲ್ ಸಭೆಯಲ್ಲಿ ಮಾತನಾಡಿ, ಭಾರತಕ್ಕೆ ಸಿಕ್ಕ ಧಿಮಂತ ನಾಯಕ ನರೇಂದ್ರ ಮೋದಿಯವರು ಏರಡನೆ ಅವಧಿಗೆ ಪ್ರಧಾನಿಗಳಾಗಿ ಏರಡು ವರ್ಷ ತುಂಬುವ ಈ ಸಂದರ್ಭದಲ್ಲಿ ಯಾರು ಊಹಿಸದಷ್ಟು ಮಾರಕ ಕರೊನಾ ರೋಗ ದೇಶವನ್ನು ಕಾಡುತ್ತಿದೆ.

ಈ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡದೆ ಪ್ರತಿಯೊಬ್ಬ ಕಾರ್ಯಕರ್ತರು ಕೊವಿಡ್ ತೊಂದರೆಯಿAದ ಬಳಲಿತ್ತಿರುವ ಅಸಹಾಯಕರಿಗೆ ದಿನಸಿ ಕಿಟ್ ವಿತರಣೆ, ಇಮ್ಯನಿಟಿ ಹೆಚ್ಚಿಸಲು ಹಾಗೂ ಸೊಂಕಿತರಿಗೆ ಔಷಧಿ ಕಿಟ್, ಆಹಾರ ಪೊಟ್ಟಣ ರಕ್ತದಾನ, ಮಾಸ್ಕ ವಿತರಣೆ, ಆರೋಗ್ಯ ಸಲಹೆ ಮತ್ತು ಪರೀಕ್ಷೆಗಳನ್ನು ಹೀಗೆ ಅನೇಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಕಾರ್ಯಕರ್ತರು ನೊವಿನಲ್ಲಿರುವ ಜನತೆಗೆ ಆಸರೆಯಾಗುವಂತಾಗಬೇಕು ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಷ್ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು ಭೂತಮಟ್ಟದ ವರೆಗೂ ಸೇವಾ ಕಾರ್ಯ ಕೈಗೊಳ್ಳಲು ಶ್ರಮಸಿಲಾಗುವದು ಎಂದರು ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೊಟ್ ಮುಂದೆ ಕೈಗೊಳ್ಳಬೇಕಾದ ಯೋಜನೆಗಳನ್ನು ತಿಳಿಸಿದರು, ಶಂಕರ ಹುರಕಡ್ಲಿ, ಮಲ್ಲಿಕಾರ್ಜುನ ಮಾದಮ್ಮನವರ, ರಾಜೇಶ ಬಿಳಗಿ, ಮಹಾದೇವ ಶಕ್ಕಿ, ಸಂಜಯ ಕೂಬಲ, ಡಾ.ಬಸವರಾಜ ಪರವಣ್ಣವರ, ಈರಣ್ಣ ಚಂದರಗಿ, ಭಿಮಶಿ ಭರಮಣ್ಣವರ, ಧನಂಜಯ ಜಾಧವ ಮುಂತಾದವರು ಇದ್ದರು.