Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ನಂದಿನಿ ಗ್ರಾಹಕರಿಗೆ ಪ್ರತಿ ಹಾಲಿನ ಪ್ಯಾಕ್ ಮೇಲೆ 20 ರಿಂದ 40 ಮಿ. ಲೀ ಹೆಚ್ಚಳ

localview news

ಬೆಳಗಾವಿ: “ವಿಶ್ವ ಹಾಲು ದಿನಾಚರಣೆ" ಅಂಗವಾಗಿ ಜೂನ್ 1 ರಿಂದ ಜೂನ್ 30 ರ ವರೆಗೆ ನಂದಿನಿ ಎಲ್ಲಾ ಮಾದರಿಯ ಪ್ರತಿ 500 ಮಿ.ಲೀ ಪ್ಯಾಕುಗಳ ಮೇಲೆ ತಲಾ 20ಮಿ.ಲೀ ಹಾಗೂ 1000 ಮಿ.ಲೀ ಹಾಲಿನ ಪ್ಯಾಕುಗಳ ಮೇಲೆ 40ಮಿ.ಲೀ. ಹಾಲನ್ನು ಉಚಿತವಾಗಿ ನೀಡಲಾಗುವುದು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಈ ಯೋಜನೆಯನ್ನು ಬೆಳಗಾವಿ ಹಾಲು ಒಕ್ಕೂಟದಿಂದ ಅನುಷ್ಟಾನಗೊಳಿಸಲಾಗುತ್ತಿದ್ದು, ಗ್ರಾಹಕರು ಇದನ್ನು ಹೆಚ್ಚಿನ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಡಳಿತ ಮಂಡಳಿಯ ವ್ಯವಸ್ಥಾಪಕ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.