Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬೆಳಗಾವಿ ಬಿಮ್ಸಗೆ ಆಕ್ಸಿಜನ್ ನೀಡಿದ ಧರ್ಮಸ್ಥಳ ಸಂಘ

localview news

ಬೆಳಗಾವಿ :ಜಿಲ್ಲೆಯ ಬಿಮ್ಸ್ ಆಸ್ಪತ್ರೆಗೆ ಪೊಜ್ಯರು ಕ್ಷೇತ್ರದಿಂದ 5 ಆಕ್ಸಿಜನ್ ಕಂಟೇನರ್ ಮಂಜೂರು ಮಾಡಿದ್ದು, ಸಂಸದೆ ಮಂಗಳ ಅಂಗಡಿಯವರು ಬಿಮ್ಸ್ ಆಸ್ಪತ್ರೆಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿ ಪೂಜ್ಯರು ಕಳೆದ 10 ವರ್ಷದಿಂದ ಜಿಲ್ಲೆಯಲ್ಲಿ ಯೋಜನೆ ಅನೇಕ ಜನಪರ ಕಾರ್ಯಕ್ರಮವನ್ನು ಮಾಡಿದ್ದು, ಇಂತಹ ಕಷ್ಟ ಸಮಯದಲ್ಲಿ ನಮ್ಮ ಜಿಲ್ಲೆಯ ಆಸ್ಪತ್ರೆಗೆ ನೀಡಿರುವುದರಿಂದ ಈ ಸಮಯದಲ್ಲಿ ಪೊಜ್ಯರಿಗೆ ಧನ್ಯವಾದಗಳನ್ನು ಕೋರಿದರು.

ಜಿಲ್ಲೆಯ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಾತನಾಡಿ, ಪೂಜ್ಯರು ಈ ಉಪಕರಣ ನೀಡಿರುವುದರಿಂದ ಖಂಡಿತವಾಗಿಯು ಜನರಿಗೆ ಅನೂಕುಲವಾಗುವುದೆಂದರು. ಧಾರವಾಡ ಪ್ರಾದೇಶಿಕ ನಿರ್ದೇಶಕರಾದ ಶ್ರೀ ದುಗ್ಗೆ ಗೌಡರವರು ಮಾತನಾಡಿ ಕೋರೊನಾ ಪೀಡಿತ ಈ ಸಂಧರ್ಭದಲ್ಲಿ ಮುಖ್ಯವಾಗಿ ಸರಕಾರಿ ಆಸ್ಪತ್ರಗಳಿಗೆ ಅವಶ್ಯಕತೆ ಇರುವ ಉಪಕರಣಗಳನ್ನು ಪೂಜ್ಯರು ಕಳುಹಿಸಿ ಕೊಟ್ಟಿರುತ್ತಾರೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ಬಿಮ್ಸ್ ನಿರ್ದೇಶಕ ವಿನಯ್ ದಾಸ್ತಿಕೊಪ್ಪ, ಜಗದೀಶ್ ಹಾರೋಕೊಪ್ಪ, ಜಿಲ್ಲಾ ನಿರ್ದೇಶಕರಾದ ಪ್ರದೀಪ ಜಿ, ಯೋಜನಾಧಿಕಾರಿಗಳಾದ ಮಂಜುನಾಥ, ಪ್ರಭಾಕರ, ಸಿಬ್ಬಂದಿಗಳು ಉಪಸ್ಥಿತರಿದ್ದರು.