Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಜನಸೇವೆಯಲ್ಲಿ ಸದಾ ಮುಂದೆ ಮಹಾಂತ ಒಕ್ಕುಂದ ಫೌಂಡೇಶನ್

localview news

ಬೆಳಗಾವಿಇವರು ಮಹಾಂತ ವಕ್ಕುಂದ ಫೌಂಡೇಶನ ನಡೆಸುತ್ತಿರುವ ಅನ್ನದಾನ ಕಾರ್ಯದ ಬಹುಮುಖ ಪಾತ್ರಧಾರಿಗಳು. ಇಲ್ಲಿಯವರೆಗೆ ಸುಮಾರು 21000 ಕ್ಕೂ ಹೆಚ್ಚು ಊಟದ ಪೊಟ್ಟಣಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆ, ಕೆ ಎಲ್ ಇ ಆಸ್ಪತ್ರೆ, ಲೇಕವ್ಯೂವ್, ಮೆಟಗುಡ್ ಆಸ್ಪತ್ರೆ ಸೇರಿದಂತೆ ಹಲವೆಡೆ ಪ್ರತಿದಿನ ಒಂದು ಕ್ಷಣವೂ ತಡಮಾಡದೆ ಸಮಯಕ್ಕೆ ಸರಿಯಾಗಿ, ಶಿಸ್ತುಬದ್ಧವಾಗಿ ಹಸಿದವರಿಗೆ, ಹಳ್ಳಿಯ ನಮ್ಮ ಜನಕ್ಕೆ, ರೋಗಿಗಳಿಗೆ ವಿತರಿಸಿದವರಿಸಿದ್ದಾರೆ.

'ಕೊರೋನ ಮಹಾಮಾರಿ - ಮನೆಯಿಂದ ಹೊರಬರದಿರಿ' ಎಂಬ ಭಯದ ನಡುವೆ ಜಗದೆಲ್ಲರೂ ತಮ್ಮನ್ನು ತಾವು ಕಾಪಾಡಿಕೊಳ್ಳಲು ಮನೆಯಲಿರುವಾಗ ಛಲದಂಕ ಮಲ್ಲರಾಗಿ ಕೊರೋನಾ ಆಸ್ಪತ್ರೆಗಳಿಗೇ ಪ್ರತಿ ನಿತ್ಯ ಭೇಟಿ ನೀಡಿ, ಊಟ ನೀಡಿ ಜನರ ಮನಗೆದ್ದಿದ್ದಾರೆ.

ಅಂದಹಾಗೆ ಇವರ್ಯಾರು ಕೋಟ್ಯಾಧೀಶರಲ್ಲ, ಪ್ರತಿ ತಿಂಗಳು ಲಕ್ಷ ಲಕ್ಷ ಸಂಬಳ ಎಣಿಸುವ ನೌಕರಸ್ತರೂ ಅಲ್ಲ ಆದರೆ ಹೃದಯ ಶ್ರೀಮಂತಿಕೆಯಲ್ಲಿ, ಜನಸೇವೆಯಲ್ಲಿ ಎಲ್ಲರನ್ನೂ ಮೀರಿಸಿದವರು. ಕೂಲಿ ನಾಲಿ ಮಾಡಿ ಆ ದಿನದ ಗಳಿಕೆಯಲ್ಲೇ ಆ ದಿನ ದೂಡುವ ಕೈಗಳು.

ಬಸವರಾಜ ದೊಡ್ಡಮನಿ,ಸಂಕೇಹಳ್ಳಿ, ಬಸವರಾಜ ವಕ್ಕುಂದ, ಅನೀಲ ವಕ್ಕುಂದ, ಸಂದೀಪ, ಅನೀಲ - ಸುನೀಲ, ಮಹೇಶ, ರಾಜು, ಸಂತೋಷ , ಮಂಜುನಾಥ, ಕುಮಾರ, ಪಿಲ್ಲು ಇನ್ನೂ ಹತ್ತು ಹಲವರು ಕಾಯಕಯೋಗಿಗಳಂತೆ ತಮ್ಮ ಸಾರ್ಥಕತೆಯ ಸೇವೆಯನ್ನು ನಿಭಾಯಿಸುತ್ತಿದ್ದಾರೆ.

ಮಹಾಂತ ವಕ್ಕುಂದ
ಬೆಳಗಾವಿ