ವಿಶ್ವ ಹಿಂದೂ ಪರಿಷತ್ ಕೋವಿಡ್ ಸೇವಾ ಘಟಕಕ್ಕೆ ಭೇಟಿ ನೀಡಿದ ಸಂಸದೆ ಮಂಗಲ ಹಾಗೂ ಡಾ.ಸೋನಾಲಿ ಸರ್ನೋಬತ
ಬೆಳಗಾವಿ: ಮಾಜಿ ಕೇಂದ್ರ ಸಚಿವ ದಿವಂಗತ ಶ್ರೀ ಸುರೇಶ್ ಅಂಗಡಿ ಜನ್ಮದಿನಾಚರಣೆಯ ನಿಮಿತ್ತ ದಿ. ಸುರೇಶ ಅಂಗಡಿ ಪತ್ನಿ ಹಾಗೂ ಬೆಳಗಾವಿ ಸಂಸದೆ ಮಂಗಲ ಅಂಗಡಿ ಇಂದು ವಿಶ್ವ ಹಿಂದೂ ಪರಿಷತ್ ಕೋವಿಡ್ ಸೇವಾ ಘಟಕಕ್ಕೆ ಆಂಬ್ಯುಲೆನ್ಸ್ ಮತ್ತು ಶವಸಂಸ್ಕಾರದ ಸೇವೆಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜೊತೆಗೆ ವಿಎಚಪಿ ಕೆಲಸಕ್ಕೆ ಧನ ಸಹಾಯವನ್ನು ಮಾಡಿದರು. ಈ ಸಂದರ್ಭದಲ್ಲಿ ಶ್ರದ್ಧಾ ಅಂಗಡಿ, ಡಾ.ಸೋನಾಲಿ ಸರ್ನೋಬತ್, ವಿಎಚ್ಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.