ವೈರಸ್ ಅಲರ್ಟ್....! ಮೊದಲ ಬಾರಿಗೆ ಮಾನವನಲ್ಲಿ ಕಂಡು ಬಂದ ಹಕ್ಕಿ ಜ್ವರ
ಚೀನಾ: ಪೂರ್ವ ಪ್ರಾಂತ್ಯದ 41 ವರ್ಷದ ವ್ಯಕ್ತಿಯೊಬ್ಬ ಹಕ್ಕಿ ಜ್ವರದಿಂದ H10N3 ಸೋಂಕಿಗೆ ತುತ್ತಾದ ಮೊದಲ ಮಾನವ ಪ್ರಕರಣ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್ಎಚ್ಸಿ) ತಿಳಿಸಿದೆ.
ಜ್ವರ ಮತ್ತು ಇತರ ರೋಗಲಕ್ಷಣಗಳನ್ನು ಕಂಡ ನಂತರ ಜಿಯಾಂಗ್ ನಗರದ ನಿವಾಸಿಯನ್ನು ಏಪ್ರಿಲ್ 28 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಎನ್ಎಚ್ಸಿ ಪ್ರಕಟಣೆಯಲ್ಲಿ ತಿಳಿಸಿದೆ. H10N3 ಮಾನವ ಸೋಂಕಿನ ಯಾವುದೇ ಪ್ರಕರಣಗಳು ಈ ಹಿಂದೆ ಜಾಗತಿಕವಾಗಿ ವರದಿಯಾಗಿಲ್ಲ ಎಂದು ಎನ್ಎಚ್ಸಿ ತಿಳಿಸಿದೆ.