Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಘಟಪ್ರಭಾ : ಸಿಡಿಲು ಬಡಿದ ಪರಿಣಾಮ ಮನೆಗೆ ಹಾನಿ.

localview news

ಘಟಪ್ರಭಾ : ಘಟಪ್ರಭಾ ಪಟ್ಟಣದ ಹೊರ ವಲಯದಲ್ಲಿರುವ ಭೋವಿ ಗಲ್ಲಿ ಸಮೀಪವಿರುವ ತೆಂಗಿನ ಮರವೊಂದಕ್ಕೆ ಇಂದು ದಿ. 03 ರ ಸಾಯಂಕಾಲ ಸಿಡಿಲು ಬಡಿದ ಪರಿಣಾಮ ಪಕ್ಕದಲ್ಲಿಯೇ ಇದ್ದ ಮನೆಗೆ ಹಾನಿಯಾಗಿದೆ. ಇಂದು ಸಾಯಂಕಾಲ 5.30ರ ಸುಮಾರಿಗೆ ಸಿಡಿಲೊಂದು ತೆಂಗಿನ ಮರಕ್ಕೆ ಬಡೆದಿದೆ.

ಸಿಡಿಲಿನ ಹೊಡೆತದಿಂದ ಗಿಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಮಳೆ ಜೋರಾಗಿದ್ದ ಕಾರಣ ಬೆಂಕಿ ಕೂಡಲೆ ಆರಿದೆ. ಆದರೆ ಗಿಡದ ಪಕ್ಕದಲ್ಲಿ ಮನೆಗೆ ಎಳೆದಿರುವ ವಿದ್ಯುತ್ ವಾಯರ್ ಸಿಡಿಲಿನ ಪ್ರಭಾವಕ್ಕೆ ಒಳಗಾಗಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಯಲ್ಲಿರುವ ಎಲ್ಲಾ ವೈರಿಂಗ್ ಸುಟ್ಟು ಹೋಗಿದ್ದೆಯಲ್ಲದೇ, ಮನೆಯಲ್ಲಿರುವ ಟಿ.ವ್ಹಿ, ಫ್ರೀಜ್ ಮತ್ತು ಪಂಪಸೆಟ್‌ಗಳೆಲ್ಲಾ ಸುಟ್ಟು ಸಾವಿರಾರು ರೂಪಾಯಿಗಳಷ್ಟು ಸಾಮಗ್ರಿಗಳು ಹಾಳಾಗಿವೆಂದು ಹೇಳಲಾಗುತ್ತಿದೆ.

ಸುದೈವಶಾತ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ. ಮನೆಯ ಮಾಲೀಕರ ಪ್ರಕಾರ, ಸಿಡಿಲು ಬಡಿದ ರಭಸಕ್ಕೆ ಭಯಂಕರ ಶಬ್ದವಾಗಿದ್ದು, ಮನೆ ನಡುಗಿರುವ ಅನುಭವ ಆಯಿತ್ತಲ್ಲದೆ, ಕ್ಷಣ ಕಾಲ ಗಾಭರಿಗೊಂಡಿರುವುದಾಗಿ ಹೇಳಿರುತ್ತಾರೆ.