ಬಿಮ್ಸ್ ಸರ್ಜರಿ ಮಾಡುವ ಸುಳಿವು ಕೊಟ್ಟ ಸಿಎಂ
ಬೆಳಗಾವಿ : ಕರೋನಾ ಕಂಟ್ರೋಲ್ ಗೆ ಬಂದರೆ ಮಾತ್ರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲಾಗುವುದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶುಕ್ರವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು, ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ಗೆ ಬರದೆ ಇದ್ದರೇ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದುಗೊಳಿಸಲಾಗುವುದು.
ವಿದ್ಯಾರ್ಥಿಗಳು ಪೋಷಕರು ಆತಂಕಪಡಬೇಡಿ ಎಂದು ಸಿಎಂ ಭರವಸೆ ನೀಡಿದರು ಸಕ್ಕರೆ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿರುವ ಕಬ್ಬಿನ ಬಿಲ್ ಶೀಘ್ರವಾಗಿ ರೈತರಿಗೆ ಮುಟ್ಟಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಆಗರ ಬಿಮ್ಸ್ ಆಸ್ಪತ್ರೆಗೆ ಸಮರ್ಥ ಐಎಎಸ್ ಅಧಿಕಾರಿಯನ್ನು ಆಳಿತ ಅಧಿಕಾರಿಯಾಗಿ ನೇಮಕ ಮಾಡಲಾಗುವುದು. ಬಿಮ್ಸ್ ಅವ್ಯವಸ್ಥೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.