Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ವಿಶ್ವ ಪರಿಸರ ದಿನಾಚರಣೆಯ ಇಂದು : ಪರಿಸರ ವ್ಯವಸ್ಥೆಯ ಮರುಸೃಷ್ಟಿಗೆ ಸಂಕಲ್ಪಗೈಯೋಣ

localview news

ಜೂನ 5 ಮತ್ತೊಂದು ಪರಿಸರ ದಿನ ಬಂದಿದೆ, ಎಲ್ಲಡೆ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಇದರಲ್ಲೇನಿದೆ ವಿಶೇಷ ಬಿಡಿ. ಪ್ರತಿದಿನಕ್ಕೂ ಒಂದು ವಿಶೇಷವಿದ್ದೇ ಇರುತ್ತದೆ ಅಂತಿರಾ, ಆದರೆ ಇವತ್ತು ಮಾತ್ರ ನಾವು ಗಂಭೀರವಾಗಿ ಚಿಂತನೆಗೆ ಹಚ್ಚಿಕೊಳ್ಳಬೇಕಾದ ವಿಶೇಷ ದಿನ. “ ಭೂಮಿ ಒಂದೇ, ಪರಿಸರವು ಒಂದೇ” ಜೀವಿಗಳು ಜೀವಿಸಲು ಬೇಕಾದ ಪರಿಸರ ಭೂಮಿ ಮೇಲೆ ಮಾತ್ರವಿದೆ. ಇದ್ದ ಒಂದು ಪರಿಸರವನ್ನು ನಾವು ಕಾಪಾಡಿಕೊಂಡು ಹೋಗುವುದು ನಮ್ಮ ಇಂದಿನ ಆದ್ಯ ಕರ್ತವ್ಯವಾಗಿದೆ.

logintomyvoice

“ಕಾಡು ಬೆಳೆಸಿ ನಾಡು ಉಳಿಸಿ, ಮನೆಗೊಂದು ಮರ ಊರಿಗೊಂದು ವನ, ಅಳಿದರೆ ಕಾಡು ಅಳುವುದು ನಾಡು, ಗಿಡಮರಗಳಾಗಲಿ ಅಮರ ಅವುಗಳಿಲ್ಲದಿರೆ ಜೀವನ ನಿಸ್ಸಾರ” ಎಂಬ ಹತ್ತು ಹಲವಾರು ಘೋಷಣೆಗಳು ಬಾಯಿಂದ ಹೇಳಿದಷ್ಟು ಸರಳವಗಿ ನಾವು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ತುಂಬಾ ಕಷ್ಟ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಮಾನವನಾದವನು ತನ್ನ ಮಕ್ಕಳನ್ನು ಸಂರಕ್ಷಿಸುವಂತೆ ತನ್ನ ಸುತ್ತಮುತ್ತಲಿನ ಪರಿಸರವನ್ನು ಪ್ರೀತಿಯಿಂದ ಕಾಣಬೇಕಾಗಿದೆ. ಇಲ್ಲದೇ ಹೋದರೆ ಮಾನವನ ಹಸ್ತಕ್ಷೇಪದಿಂದ ದಿನದಿಂದ ದಿನ ಪರಿಸರ ನಾಶವಾಗುತ್ತಾ ಹೋಗಿ ಒಂದು ದಿನ ನಮ್ಮ ಭೂಮಿ ಮಂಗಳ ಗ್ರಹದಂತೆ ಬರಡಾಗಿ ಬಿಡುತ್ತದೆ ಎಂಬುದು ಅಷ್ಟೇ ಸತ್ಯಈ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯು ಪರಿಸರ ಸಂರಕ್ಷಣೆಯ ಕಾರ್ಯಕ್ರಮದ ಮುಖಾಂತರ ಜಗತಿನಾದ್ಯಂತ ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸಲು ಸಾಂಕೇತಿವಾಗಿ ಜೂನ 5 ರಂದು ಹಲವಾರು ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗುತ್ತದೆ. 1972 ರಲ್ಲಿ ಸ್ವೀಡನ ದೇಶದ ರಾಜ್ಯಧಾನಿ ಸ್ಟಾಕ ಹೋಮನಲ್ಲಿ ನಡೆದ ವಿಶ್ವ ಸಂಸ್ಥೆಯ ಸಮ್ಮೇಳನದಲ್ಲಿ ಅದರ ಸವಿನೆನಪಿಗಾಗಿ 1974 ಜೂನ 5 ರಿಂದ ವಿಶ್ವಪರಿಸರ ದಿನ ಎಂದು ಸಾಂಕೇತಿಕವಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಪ್ರತಿವರ್ಷವು ಒಂದೊಂದು ಧೈಯವಾಕ್ಯದೊಂದಿಗೆ ಈ ದಿನವನ್ನ ಆಚರಿಸುತ್ತದೆ.

logintomyvoice

2021 ರ ಘೋಷವಾಕ್ಯ: “ಪರಿಸರ ವ್ಯವಸ್ಥೆಯ ಪುನ:ಸ್ಥಾಪನೆ” ಅಂದರೆ ಸಕ್ರಿಯವಾಗಿ ಮರಗಿಡಗಳನ್ನ ನೆಡುವುದರ ಮೂಲಕ ಅಥವಾ ಪರಿಸರ ವ್ಯವಸ್ಥೆಯನ್ನ ರಕ್ಷಿಸುವ ಮೂಲಕ ಹಾಗೂ ಹೆಚ್ಚುತ್ತಿರುವ ಮಾಲಿನ್ಯವನ್ನ ಕಡಿಮೆಗೊಳಿಸಿ ಪರಿಸರದ ಮೇಲಿನ ಒತ್ತಡಗಳನ್ನು ಕಡಿಮೆಗೊಳಿಸಿ ಪರಿಸರವನ್ನ ರಕ್ಷಸಿಸುವುದು.

logintomyvoice

ಇಂದು ನಮ್ಮ ಪರಿಸರ ಕಾಳಜಿಯನ್ನು ಮರುವಿಮರ್ಶೆಗೆ ಒಡ್ಡಿಕೊಳ್ಳುವ ದಿನ. ಕೇವಲ ಹಸಿರು ನಡಿಗೆ, ಹಸಿರು ರ್ಯಾಲಿ, ಸಸಿ ವಿತರಣೆ, ಘೋಷವಾಕ್ಯ ಬರವಣಗೆ, ಪರಿಸರ ಉಳಿಸುವ ಚಿತ್ರಗಳು, ಸ್ಪರ್ದೆ ಮತ್ತು ಸಭಾ ಕಾರ್ಯಗಳಿಗೆ ಸೀಮಿತವಾಗಬಾರದು. ಮನುಷ್ಯನ ಆಶೆ- ಆಕಾಂಕ್ಷೇಗಳಿಗೆ ಮಿತಿ ಎಂಬುದೇಯಿಲ್ಲ. ಕೈಗಾರಿಕಿಕರಣ ಹೆಸರಿನಲ್ಲಿ, ಅಭಿವೃದ್ದಿಯ ನೆಪದಲ್ಲಿ ಗಿಡಮರಗಳನ್ನು ಕಡಿದು ನೆಲೆ, ಹೊಲ, ಜಲಗಳನ್ನ ಕಲುಷಿತಗೊಳಿಸಿ ಸಸ್ಯರಾಶಿಯನ್ನು ಬಲಿತೆಗೆದು ಕಾಡುಕಡಿದು ಕಾಂಕ್ರೀಂಟ ನಾಡು ಮಾಡುವ ಹುನ್ನಾರದಿಂದ ನಾವು ಬದುಕುವ ನೈತಿಕ ಹಕ್ಕನ್ನೇ ಕಳೆದುಕೊಂಡಿದ್ದೇವೆ ಎಂದರೂ ತಪ್ಪಿಲ್ಲ.

logintomyvoice

ಪಕ್ಷಿಗಳು ರಕ್ಕೆಗಳ ಸಹಾಯದಿಂದ ಆಕಾಶದಲ್ಲಿ ಹಾರುತ್ತವೆ. ಮೀನುಗಳು ಕಿವಿರುಗಳ ಸಹಾಯದಿಂದ ಉಸಿರಾಡಿ ನೀರಿನಲ್ಲಿ ವಾಸಿಸುತ್ತವೆ. ಮರಭೂಮಿಯಲ್ಲಿ ಬದುಕಬಲ್ಲ ಕಳ್ಳಿಯಲ್ಲಿ ಎಲೆಗಳೇ ಮುಳ್ಳುಗಳಾಗಿವೆ. ಇಂಥ ಹೊಂದಾಣಿಕೆಗೆ ಕಾರಣವೇ ಆಯಾ ಪ್ರದೇಶದ ಪರಿಸರ, ಜೈವಿಕವಾಗಿ ಸಸ್ಯ ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಬಾಹ್ಯಕಾರಕಗಳನ್ನು ಪರಿಸರವೆಂದು ಗುರುತಿಸಲಾಗಿದೆ. ಈ ದೃಷ್ಟಿಯಿಂದ ಒಂದು ಪ್ರದೇಶದ ಜೀವ ಸಮುದಾಯ, ನೀರು, ನೆಲೆ, ಉಷ್ಣತೆ, ಆದ್ರತೆ, ಬೆಳಕು, ಸಮುದ್ರಮಟ್ಟ, ಆಹಾರ ಒದಗುವಿಕೆ ಎಲ್ಲವೂ ಈ ನಮ್ಮ ಪರಿಸರದ ವ್ಯಾಪ್ತಿಗೆ ಬರುತ್ತದೆ.

logintomyvoice

ಮನುಷ್ಯನು ಪರಿಸರಕ್ಕೆ ಸರಿಯಾಗಿ ಹೊಂದಿಕೊಳ್ಳುವುದರೊಂದಿಗೆ ತನ್ನ ದೈನಂದಿನ ಅನುಕೂಲಕ್ಕಾಗಿ ಪರಿಸರವನ್ನೇ ಬದಲಾಯಿಸುವ ಕ್ರಮಗಳನ್ನು ಕೈಗೊಂಡಿದ್ದಾನೆ. ಜನಬಿಡತೆ, ತಂತ್ರಜ್ಞಾನ- ವಿಜ್ಞಾನ ಪ್ರಗತಿ, ಕೈಗಾರಿಕೋದ್ಯಮಗಳ ಹೆಚ್ಚಳ, ಮನುಷ್ಯನ ನಿತ್ಯ ಜೀವನಕ್ಕೆ ತೊಂದರೆಗಳನ್ನು ಒಡ್ಡಿವೆ. ಪ್ರಕೃತಿ ಜತನದಿಂದ ಕಾದು ಬಂದಿರುವ ಸಮತೋಲನ ಇದರಿಂದ ಅಡಿಮೇಲಾಗುತ್ತಿದೆ ಎನ್ನಬಹುದು. ಈ ಭೂಮಿತಾಯಿಯ ಮೇಲೆ ಅವಿರತವಾಗಿ ನಿರಂತರವಾಗಿ ದೌರ್ಜನ್ಯ ಹಗಲು-ಇರುಳು ನಡೆಯುತ್ತಲೆ ಇದೆ. ಭೂ ತಾಯಿಯ ಮೂಕರೋಧನವನ್ನ ಕೇಳುವ ಕಿವಿಗಳು ಬರಡಾಗಿ ನೋಡುವ ಕಣ್ಣುಗಳು ಕುರುಡಾಗಿ ಯಾಂತ್ರಿಕೃತ ಬದುಕಿನಲ್ಲಿ ಜನರು ಉಸಿರಾಡಲು ಕಷ್ಟವಾಗುವ ಪರಿಸ್ಥಿತಿ ಬಂದೊದಗಿದೆ. ಅಕ್ರಮ ಗಣಿಗಾರಿಕೆ, ಅವೈಜ್ಞಾನಿಕ ಮೀನುಗಾರಿಕೆ, ಇಂಧನ ಹಾಗೂ ನೈರ್ಸಗಿಕ ಸಂಪನ್ಮೂಲಗಳ ಕೊಳ್ಳೆಗಾರಿಕೆ ಹೀಗೆ ಒಂದಲ್ಲ ಎರಡಲ್ಲ ಹಗಲು ರಾತ್ರಿ ಮನುಷ್ಯನ ದಬ್ಬಾಳಿಕೆ ಎಗ್ಗಿಲ್ಲದೆ ನಡೆಯುತ್ತಲೇಯಿದೆ.

logintomyvoice

ಪ್ಲಾಸ್ಟಿಕ ಬಳಕೆ ತ್ಯಜೀಸೋಣ-ಪ್ರಕೃತಿ ಉಳಿಸೋಣ: ಆಧುನಿಕ ಶತಮಾನದ ಬಹುದೊಡ್ಡ ಪೆಡಂಭೂತ ಪ್ಲಾಸ್ಟಿಕ ಅಂದರೆ ತಪ್ಪಾಗಲಾರದು. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಪ್ಲಾಸ್ಟಿಕ ಬೆಳೆದು ನಿಂತಿದೆ. ಒಂದು ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿದಿನ 22 ಲಕ್ಷ ಟನ್ನ್‍ಷ್ಟು ಪ್ಲಾಸ್ಟಿಕನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕಯಿಲ್ಲದೇ ನಮ್ಮ ಜೀವನದ ರಥ ಮುಂದೇ ಹೋಗುವುದೇಯಿಲ್ಲ ಎಂಬ ಹಂತಕ್ಕೆ ಬಂದು ನಿಂತಿದ್ದೇವೆ. 40 ಮೈಕ್ರಾನಗಿಂತ ಜಾಸ್ತಿಯಿರುವ ತೆಳು ಪ್ಲಾಸ್ಟಿಕ ಬಳಕೆ ನಮ್ಮ ದೇಶದಲ್ಲಿ ನಿಷೇದಿಸಿದ್ದರೂ ಅದರ ಗೊಡವೆ ಯಾರಿಗೂಯಿಲ್ಲ. ಎಲ್ಲೆಂದರಲ್ಲಿ ಪ್ಲಾಸ್ಟಿಕ ಬಳಕೆ ಎಗ್ಗಿಲ್ಲದೇ ನಡೆಯುತ್ತದೆ. ನಾವು ಕುಡಿಯುವ ನೀರು, ತಿನ್ನುವ ಚಾಟ್ ಎಲ್ಲದಕ್ಕೂ ಪ್ಲಾಸ್ಟಿಕ ಅನಿವಾರ್ಯ ಅಲ್ಲದೆ ಪ್ಲಾಸ್ಟಿಕನಲ್ಲಿರುವ ‘ಡೈಯಾಕ್ಸಿನ’ ಎಂಬ ರಾಸಾಯನಿಕ ಕ್ಯಾನ್ಸರನಂತಹ ರೋಗಕ್ಕೆ ಕಾರಣವಾಗಬಹುದು. ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ ಡಬ್ಬಗಳಲ್ಲಿ ಹಾಕಿದಾಗ ಅದರಲ್ಲಿನ’ ಪ್ಲಾಸ್ಟನೈಸರ’ ಎಂಬ ರಾಸಾಯನಿಕ ಕರಗಿ ನಮ್ಮ ರಕ್ತನಾಳಕ್ಕೆ ಸುಲಭವಾಗಿ ಸೇರಿ ಕಣ್ಣು ಕುರುಡಾಗುವ ಅಪಾಯವುಂಟು.ಕಾರ್ಖಾನೆಗಳಿಂದ ಕ್ಯಾನ್ಸರ ಹಬ್ಬಿಸಬಲ್ಲ ವಿಷಪೂರಿತ ರಾಸಾಯನಿಕಗಳು ದಿನನಿತ್ಯವು ಪರಿಸರಕ್ಕೆ ಸೇರುತ್ತವೆ. ವಾತಾವರಣದ ಓಝೋನ ವಲಯ ಛಿದ್ರಗೊಳ್ಳುತ್ತದೆ. ಆಮ್ಲ ಮಳೆ ಸುರಿಯುತ್ತದೆ. ಕೈಗಾರಿಕೆಗಳಿಂದ ಬಿಡುಗಡೆಯಾಗುವ ಇಂಗಾಲದ ಡೈಯಾಕ್ಸೈಡ, ಕಾರ್ಬನ ಡೈಯಾಕ್ಸೈಡ, ಮಿಥೇನ ಮುಂತಾದ ಅನಿಲಗಳು ನಾವು ಉಸಿರಾಡುವ ಗಾಳಿಯನ್ನ ಕಲುಷಿತಗೊಳಿಸಿವೆ. ಮರಭೂಮಿ ವಿಸ್ತರಿಸಿದೆ, ಅಂತರ್ಜಲ ಬತ್ತಿ ಕೆರೆ-ಬಾವಿಗಳು ಬರಡಾಗುತ್ತಿವೆ. ನೂರಾರು ಅಡಿ ಅಗಿದರೂ ಕೊಳವೆ ಬಾವಿಗಳಲ್ಲಿ ಹನಿ ನೀರು ಕೂಡ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇರುವ ಜಲಮೂಲಗಳು ಮಲಿನಗೊಂಡು, ಕುಡಿಯುವ ಹನಿ-ಹನಿ ನೀರಿಗೂ ತಾತ್ಸರ ಬಂದೊಗಿದೆ. ಅಲ್ಲದೇ ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಜೀವ ಸಂಕುಲಗಳ ಸಮತೋಲನಕ್ಕೆ ದಕ್ಕೆ ಬಂದಿದೆ.

ಮನುಷ್ಯನ ಆಸೆ ಬುರುಕತನಕ್ಕೆ ಎಣೆಯೇಯಿಲ್ಲದಂತಾಗಿದ್ದು ತಾನು ಅಭಿವೃದ್ದಿ ಹೊಂದುವ ನೆಪದಲ್ಲಿ ಭೂತಾಯಿಯ ಒಡಲನ್ನು ಅಗಿದು, ಬಗೆದು ಬರಡು ಮಾಡುತ್ತಿದ್ದಾನೆ. ಈ ಸಂದರ್ಭದಲ್ಲಿ ಗಾಂಧೀಜಿಯ ಮಾತು ಸೂಕ್ತವೆನಿಸುವುದು. – “ಈ ಭೂಮಿ ಎಲ್ಲರ ಆಸೆಗಳನ್ನ ಪೂರೈಸಬಲ್ಲದು ಆದರೆ ದುರಾಸೆಗಳನ್ನಲ್ಲ” ಈ ಕಾರಣದಿಂದಲೇ ಹಿರಿಯರು, ಪರಿಸರವಾದಿಗಳು ಭೂತಾಯಿಯನ್ನ ಹೀಗೆ ವರ್ಣೀಸುತ್ತಾರೆ. “ ಈ ಭೂಮಿ ತಮ್ಮ ತಾತ-ಮುತ್ತಾರಿದಂದ ಬಂದ ಬಳುವಳಿಯಲ್ಲ ಮಕ್ಕಳು ಮೊಮ್ಮಕಳಿಂದ ಎರವಲಾಗಿ ಪಡೆದದ್ದು. ಒಟ್ಟಿನಲ್ಲಿ ಸಂಪದ್ವರಿತವಾದ ಭೂಮಿಯನ್ನ ಬರಡಾಗಿಸುವ ಹಕ್ಕು ಯಾರೊಬ್ಬರಿಗೂ ಇಲ್ಲ.

ಕಳೆದೊಂದು ವರ್ಷದಿಂದ ಕೋವಿಡ್-19 ರ ಕರಿನೆರಳಲ್ಲಿ ಬದುಕುತ್ತಿರುವ ನಮಗೆ ಪ್ರಕೃತಿ ಕಲಿಸಿದ ಪಾಠ ಒಂದೇ ಎರಡೇ, ಭೂಮಿಯ ಮೇಲೆ ಅಧಿಪತ್ಯವನ್ನ ಸ್ಥಾಪಿಸ ಹೊರಟ ನಮಗೆ ಈ ಭೂಮಿಯಲ್ಲಿ ನಾವೇನು ಎಂಬುದನ್ನ ತೋರಿಸಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಕೋವಿಡ್ -19 ವಿರುದ್ದದ ಹೋರಾಟದಲ್ಲಿ ನಾವು ಗೆಲ್ಲಬಹುದು. ಆದರೆ ಕಾಲಚಕ್ರ ಮಾತ್ರ ಉರುಳುತ್ತಿರುತ್ತದೆ. ವೈರಸ್‍ಗಳು ಹೊಸ ರೂಪದಲ್ಲಿ ಮನುಕುಲವನ್ನ ಕಾಡಬಹುದು. ಈ ಕಾರಣಕ್ಕಾಗಿ ನಮ್ಮ ಮುಂದಿನ ಜನಾಂಗಕ್ಕಾದರೂ ಪರಿಸರವನ್ನ ರಕ್ಷಿಸುವ ಅನಿವಾರ್ಯತೆಯಿದೆ. ಈ ದಿಶೆಯಲ್ಲಿ ಭೂತಾಯಿಯ ಒಡಲನ್ನು ಶ್ರೀಮಂತಗೊಳಿಸಲು ನಾವು ಮಾಡಬೇಕಾದ ಬಹುಮುಖ್ಯ ಕಾರ್ಯಗಳೆಂದರೆ ಜನಸಂಖ್ಯಾ ಸ್ಪೋಟವನ್ನ ತಡೆಗಟ್ಟುವುದು, ಬೆಳೆ ಬೆಳೆಯುವ ಭೂಮಿಯನ್ನ ಸಂರಕ್ಷಿಸುವುದು, ಮರಗಿಡಗಳನ್ನ ನೆಟ್ಟು ಅಡವಿಗಳನ್ನ ನಿರ್ಮಿಸುವುದು, ಜೀವಪರಿಸರ ನಿರ್ವಹಣೆ ಮತ್ತು ಸುಸ್ಥಿರ ಸಂಪನ್ಮೂಲಗಳ ಬಳಕೆ ಇತ್ಯಾದಿಗಳ ಬಗ್ಗೆ ಚಿಂತನೆ ನಡೆಸಿ, ವಾಯುಮಾಲಿನ್ಯ, ಜಲಮಾಲಿನ್ಯ ಮಾಡುವುದನ್ನ ನಿಲ್ಲಿಸಬೇಕು, ನೀರು ಪೋಲಾಗದಂತೆ ಮಿತವಾಗಿ ಬಳಸುವುದು, ಪೆಟ್ರೋಲ್, ಡಿಸೇಲ್ ವಾಹನಗಳ ಬಳಕೆ ಕಡಿಮೆ ಮಾಡುವುದು ಬಹುಮುಖ್ಯವೆನಿಸಿದೆ.

ಮನುಷ್ಯ ತನ್ನ ದುರಾಸೆ ತ್ಯಜಿಸಿ, ಕ್ಷಣಿಕ ಸುಖದ ಆಸೆಗೆ ತೀಲಾಂಜಲಿ ಬಿಟ್ಟು ತಾನು ಬದುಕುವ ನೆಲೆ, ಜಲಕ್ಕೆ ಗೌರವ ನೀಡಿದಲ್ಲಿ ಮಾತ್ರ ಮುಂದಿನ ಜನಾಂಗಕ್ಕೂ ಬದುಕಲು ಅಣಿಯಾಗಬಹುದು. ಇಲ್ಲವಾದಲ್ಲಿ ನೈರ್ಸಗಿಕ ಸಂಪನ್ಮೂಲಗಳು ಬರಿದಾಗಿ, ಭೂಮಿ ಬರಡಾಗಿ, ಊಸಿರಾಡುವ ಗಾಳಿಗೆ, ಕುಡಿಯುವ ನೀರಿಗೆ ಮತ್ತು ತಿನ್ನುವ ತುತ್ತು ಅನ್ನಕ್ಕೂ ತತ್ಸಾರ ಬರುವ ದಿನಗಳು ದೂರವಿಲ್ಲ.

logintomyvoice

ಬನ್ನಿ ಗೆಳೆಯರೇ ಇಂದೇ ಶಪಥ ಮಾಡೋಣ ಪರಿಸರ ಮಾಲಿನ್ಯಕ್ಕೆ ಎಡೆಮಾಡುವ ಮತ್ತು ಭೂತಾಯಿಯ ಒಡಲನ್ನ ಬರಡು ಮಾಡುವ ಎಲ್ಲಾ ಕಾರ್ಯಗಳಿಗೆ ತೀಲಾಂಜಲಿ ಇಡೋಣ, ಇತರ ಜೀವ ಸಂಕುಲಗಳನ್ನ ಬದುಕಲು ಅವಕಾಶ ನೀಡೋಣ ಮತ್ತು ನಮ್ಮ ಮುಂದಿನ ತಲೆಮಾರಿನ ಜೀವಿಗಳು ಬದುಕಲು ಪೂರಕವಾಗುವ ನೆಲ, ಹೊಲ, ಜಲ, ಗಾಳಿ, ನೀರು ಊಳಿಸುವ ಪುಣ್ಯ ಕಾರ್ಯಕ್ಕೆ ಟೋಂಕ ಕಟ್ಟೋಣ. ಹೇಗೆ ನಮ್ಮ ಹಿರಿಯರು ಪರಿಸರವನ್ನ ಕಾಪಾಡಿಕೊಂಡು ನಮಗೆ ನೀಡಿದರೋ ಹಾಗೇ ನಾವು ಮುಂದಿನ ಪೀಳಿಗೆಗೆ ಒಳ್ಳೇಯ ಪರಿಸರವನ್ನ ನಿಡೋಣ, ವಿಶ್ವದ ಪರಿಸರಕ್ಕಾಗಿ ನಾವೆಲ್ಲ ಒಂದಾಗೋಣ.


ರಮೇಶಗೌಡ ಆರ್.ಪಾಟೀಲ
ಕಾಡು ಬೆಳೆಸಿ ನಾಡು ಉಳಿಸಿ ಇದು ಲೋಕಲವಿವ ತಂಡದಿಂದ ಕೋರಿಕೆ.