ಸಹಜ ಸ್ಥಿತಿಯತ್ತ ರಾಷ್ಟ್ರ ರಾಜಧಾನಿ ದೆಹಲಿ
ನವದೆಹಲಿ: ಕಳೆದ ಸುಮಾರು ಒಂದೂವರೆ ತಿಂಗಳ ಸಂಪೂರ್ಣ ಲಾಕ್ಡೌನ್ ನಂತರ, ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯು ಮತ್ತೆ ಇಂದಿನಿಂದ ಸಹಜ ಸ್ಥಿತಿಗೆ ಮರಳಲು ಪ್ರಾರಂಭಿಸಿದೆ.
ದೆಹಲಿಯಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಕಡಿಮೆಯಾದ ನಂತರ, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜೂನ್ 7 ರಿಂದ ಲಾಕ್ ಡೌನ್ ನಿರ್ಬಂಧಗಳಲ್ಲಿ ಸಡಿಲಗೊಳಿಸುವಿಕೆಯನ್ನು ಘೋಷಿಸಿದ್ದರು.