Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಎಬಿವಿಪಿ ವತಿಯಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ

localview news

ಬೆಳಗಾವಿ: ಎಬಿವಿಪಿ ಕರ್ನಾಟಕ ಕರೆ ನೀಡಿದ್ದ ಆಕ್ಸಿಜನ್ ಚಾಲೆಂಜ್ 5ನೇ ದಿನದ ಅಭಿಯಾನದ ಜೊತೆಗೆ ಇಂದು ಎಬಿವಿಪಿ ಬೆಳಗಾವಿ ವತಿಯಿಂದ ಅದೇ ಜಾಗದಲ್ಲಿ ಹಚ್ಚಿದ ಹಳೆಯ ಗಿಡಗಳ ಸಂರಕ್ಷಣೆ ಕಾರ್ಯ ನಡೆಸಿದರು.

ನಗರದ ಕುವೆಂಪುನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಕಾರ್ಯವಾಹಗಳಾದ ರಾಘವೇಂದ್ರ ಕಾಗವಾಡ ಮತ್ತು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ .ಆನಂದ ಹೊಸುರರವರು ಸಸಿಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ಪ್ರೋ. ಪ್ರವೀಣ್ ಪ್ಯಾಟೆ, ಪರಿಷತನ ಹಿರಿಯ ಕಾರ್ಯಕರ್ತರಾದ ಗಂಗಾಧರ ಗಡಿಬಿಡಿ, ಕೇದಾರಲಿಂಗ ಮತ್ತು ವಿಭಾಗ ಸಂಚಾಲಕರಾದ ರೋಹಿತ್ ಉಮನಾಬಾದಿಮಠ, ಅನುದೀಪ, ಮಂಜುನಾಥ, ಶ್ರೀನಾಥ, ಸುರೇಶ್ ಹಾಗೂ ಇತರರು ಭಾಗವಹಿಸಿದ್ದರು.