Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಉದ್ಯಾನ ವನ ದುರಸ್ತಿಗೆ ಸ್ಥಳೀಯರ ಒತ್ತಾಯ

localview news

ಮೂಡಲಗಿ : ನಗರದ ರಿ ಸ ನಂ. ೫೪೦/೧೧ ರಲ್ಲಿ ರಸ್ತೆ, ಚರಂಡಿ ಹಾಗೂ ಉದ್ಯಾನವನವನ್ನು ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ಅನಾರೋಗ್ಯದಿಂದ ಗೈರು ಹಾಜರಾಗಿರುವ ಮುಖ್ಯಾಧಿಕಾರಿಯವರ ಬದಲಿಗೆ ಮುಖ್ಯ ಅಭಿಯಂತರರಿಗೆ ಮನವಿ ಸಲ್ಲಿಸಿರುವ ನಾಗರಿಕರು ೧೯೯೦-೨೦೦೦ರಲ್ಲಿ ಟೌನ್ ಪ್ಲಾನಿಂಗ್ ಆಗಿರುವ ರಿ. ಸ ನಂ ೫೪೦/ ೧೧ ರಲ್ಲಿ ಸರಿಯಾದ ರಸ್ತೆ ಇಲ್ಲ,ಚರಂಡಿ ಮೇಲ್ಸೇತುವೆ ಕಟ್ಟಲಾಗಿದೆ ಆದರೆ ಅದು ನಾಲ್ಕು ಅಡಿ ಎತ್ತರವಾಗಿದೆ, ಪಾರ್ಕ್ ಸ್ಥಾಪನೆಗೆ ಜಾಗ ಬಿಡಲಾಗಿದೆ ಆದರೆ ಪಾರ್ಕ್ ಆಗಿಲ್ಲ ಇವುಗಳನ್ನು ಮಾಡಬೇಕೆಂದು ಕಳೆದ ಇಪ್ಪತ್ತು ವರ್ಷಗಳಿಂದಲೂ ಬೇಡಿಕೆ ಇಟ್ಟಿದ್ದರೂ ಪುರಸಭೆಯವರು ಮಾಡುತ್ತಿಲ್ಲ ಕಾರಣ ರಸ್ತೆ, ಚರಂಡಿ ಹಾಗೂ ಪಾರ್ಕ್ ಗಳನ್ನು ಬೇಗನೆ ಮಾಡಿಕೊಡಬೇಕು ಎಂದು ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

logintomyvoice

ತಮ್ಮ ಬೇಡಿಕೆಯನ್ನು ಬೇಗನೆ ಈಡೇರಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ನಾಗರಿಕರು ಎಚ್ಚರಿಸಿದ್ದಾರೆ. ಸೋಮೇಶ ಹಿರೇಮಠ, ಸುರೇಶ ನಿಡಗುಂದಿ, ಸುನೀಲ ನಿಡಗುಂದಿ, ರಾಜು ಹಂಚಿನಾಳ, ಶ್ರೀಧರ ಪತ್ತಾರ, ರಾಜಶ್ರೀ ನಿಡಗುಂದಿ,ಸರಸ್ವತಿ ನಿಡಗುಂದಿ, ಮಹಾದೇವಿ ಪಾಟೀಲ, ಲಕ್ಷ್ಮೀ ಮುನ್ಯಾಳ, ಶೋಭಾ ಪಾಟೀಲ, ಶ್ರೀಶೈಲ ಪಾಟೀಲ, ಎನ್ ಆಯ್ ಯಕ್ಕುಂಡಿ ಇದ್ದರು