Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಚಿನ್ನದ ಸರ ನುಂಗಿದ ನಾಯಿ

localview news

ಕೊಪ್ಪಳ: ಮನೆಯಲ್ಲಿನ ಸಾಕು ನಾಯಿ ಸುಮಾರು 20 ಗ್ರಾಂ ಚಿನ್ನದ ಚೈನ್ ಗುಳುಂ ಮಾಡಿರುವ ಘಟನೆ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ನಿನ್ನೆ ನಡೆದಿದೆ. ಪಟ್ಟಣದ ನಿವಾಸಿಯಾಗಿರುವ ದಿಲೀಪ್ ಕುಮಾರ್ ಹಿರೇಮಠ ಎಂಬುವವರ ಪಮೋರಿಯನ್ ತಳಿಯ ನಾಯಿ ಚಿನ್ನ ನುಂಗಿದೆ. ಕಳೆದ ಎರಡು ತಿಂಗಳ ಹಿಂದಿನಿಂದ ಮನೆಯಲ್ಲಿ ಸಾಕುತ್ತಿದ್ದ ಮೂರು ತಿಂಗಳ ಪ್ರಾಯದ ಈ ನಾಯಿಮರಿ ನಿನ್ನೆ ರಾತ್ರಿ ಸುಮಾರು 23 ಇಂಚು ಉದ್ದದ 20 ಗ್ರಾಂ ತೂಕದ ಚಿನ್ನದ ಸರವನ್ನು ತಿಂದಿದೆ. ದಿಲೀಪ್ ಅವರು ನಿನ್ನೆ ರಾತ್ರಿ ತಮ್ಮ ಕೊರಳಲ್ಲಿದ್ದ ಚಿನ್ನದ ಚೈನ್‍ನ್ನು ಬಿಚ್ಚಿ ಕೆಳಗೆ ಇಟ್ಟಿದ್ದರಂತೆ. ರಾತ್ರಿ ವೇಳೆಯಲ್ಲಿ ಈ ನಾಯಿ ಆ ಚಿನ್ನದ ಚೈನನ್ನು ಗುಳುಂ ಮಾಡಿದೆ. ಇಂದು ಬೆಳಗ್ಗೆ ಎದ್ದು ನಾಯಿಗೆ ಹಾಲಿಡಲು ಹೋದಾಗ ಚಿನ್ನದ ಚೈನ್‍ನ ತುಂಡೊಂದು ಕೆಳಗೆ ಬಿದ್ದಿರೋದು ಕಾಣಿಸಿದೆ. ಬಳಿಕ ಚಿನ್ನದ ಚೈನನ್ನು ದಿಲೀಪ್ ಅವರು ಹುಡುಕಾಡಿದ್ದಾರೆ. ಅದು ಸಿಗದೆ ಇದ್ದಾಗ ನಾಯಿ ಗುಳುಂ ಮಾಡಿರುವ ಶಂಕೆಯಿಂದ ಸ್ಥಳೀಯ ಪಶುವೈದ್ಯರಾದ ಡಾ. ಆಕಾಶ್ ಅವರ ಬಳಿ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಿದ್ದಾರೆ.