Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಮೋದಿ ಸರಕಾರವು ‘ಫೇಸ್‌ಬುಕ್’ಗೆ ಪರ್ಯಾಯವಾಗಿ ಸ್ವದೇಶಿಆಪ್ ಅಭಿವೃದ್ಧಿಪಡಿಸಬೇಕು ! - ಟಿ. ರಾಜಾ ಸಿಂಗ್, ಬಿಜೆಪಿ ಶಾಸಕ, ತೆಲಂಗಣಾ

localview news

ತೆಲಂಗಾಣ :ಇಂದು, ದೇಶದ ಹಿಂದುತ್ವವಾದಿ ಸಂಘಟನೆಗಳನ್ನು ಸಾಮಾಜಿಕ ಮಾಧ್ಯಮಗಳನ್ನು ನಡೆಸುತ್ತಿರುವ ವಿದೇಶಿ ಸಂಸ್ಥೆಗಳಿಂದ ಗುರಿಪಡಿಸಲಾಗುತ್ತಿದೆ. ಅವರ ಪುಟಗಳನ್ನು ಫೇಸ್‌ಬುಕ್ ನಿರ್ಬಂಧಿಸುತ್ತಿದ್ದರೆ, ಟ್ವಿಟರ್‌ನಿಂದ ಭಾರತದ ಉಪರಾಷ್ಟ್ರಪತಿ ಮತ್ತು ಸ್ವಯಂ ಸೇವಕ ಸಂಘದ ಮೋಹನ ಭಾಗವತ ಅವರ ಅಧಿಕೃತ ಖಾತೆಗಳ ‘ಬ್ಲೂ ಟಿಕ್’ ಅನ್ನು ತೆಗೆಯಲಾಗುತ್ತಿದೆ.

‘ಸುದರ್ಶನ್ ನ್ಯೂಸ್’ ನಂತಹ ಚಾನೆಲ್‌ನ ಪುಟವನ್ನೂ ಬಂದ್ ಮಾಡಲಾಗುತ್ತದೆ. ನಾನು ಜನಪ್ರತಿನಿಧಿ ಆಗಿದ್ದರೂ ನನ್ನ ಫೇಸ್‌ಬುಕ್ ಖಾತೆಯನ್ನು ಬಂದ್ ಮಾಡಲಾಗಿದೆ. ಮತ್ತೊಂದೆಡೆ ಭಯೋತ್ಪಾದಕರನ್ನು ಪ್ರಚೋದಿಸುವ ಡಾ. ಝಾಕೀರ್ ನಾಯಿಕ್, ಹಿಂದೂಗಳನ್ನು ಮುಗಿಸುವ ಭಾಷೆಯನ್ನು ಮಾತನಾಡುವ ಅಕಬರುದ್ದೀನ್ ಒವೈಸಿ, ಪಾಕಿಸ್ತಾನದಲ್ಲಿನ ಅನೇಕ ಭಯೋತ್ಪಾದಕ ಸಂಘಟನೆಗಳ ಫೆಸ್‌ಬುಕ, ಟ್ವಿಟರ್ ಇತ್ಯಾದಿ ಸಾಮಾಜಿಕ ಮಾಧ್ಯಮ ಖಾತೆಗಳು ಸಾರಾಸಗಟಾಗಿ ನಡೆಯುತ್ತಿವೆ.

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಹಲವು ವರ್ಷಗಳು ಕಳೆದಿವೆ, ಆದರೂ ವಿದೇಶಿಯರು ಸಾಮಾಜಿಕ ಮಾಧ್ಯಮಗಳ ಮೂಲಕ ನಮ್ಮನ್ನು ಆಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ನನ್ನ ವಿನಂತಿಯೆಂದರೆ, ವಿದೇಶಿ ‘ಫೇಸ್‌ಬುಕ್’ಗಾಗಿ ನಾವು ಎಷ್ಟು ದಿನ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಪಾದನೆ ಮಾಡಿ ಕೊಡುವವರಿದ್ದೇವೆ ? ‘ಮೇಕ್ ಇನ್ ಇಂಡಿಯಾ’ ಭೂಮಿಯಲ್ಲಿ ಭಾರತ ಸರಕಾರ ಫೇಸ್‌ಬುಕ್‌ನಂತಹ ಸ್ವದೇಶಿ ಆಪ್ ಅನ್ನು ಅಭಿವೃದ್ಧಿಪಡಿಸಬೇಕು ಎಂದು ಬಿಜೆಪಿಯ ಹಿಂದುತ್ವನಿಷ್ಠ ಶಾಸಕ ತೆಲಂಗಾಣ ರಾಜ್ಯದ ಶ್ರೀ. ಟಿ. ರಾಜಾ ಸಿಂಗ್ ಹೇಳಿದರು. ‘ಹಿಂದೂ ಜನಜಾಗೃತಿ ಸಮಿತಿ’ ಆಯೋಜಿಸಿದ್ದ ‘ಫೇಸ್‌ಬುಕ್‌ನ ಹಿಂದೂದ್ವೇಷ’, ಕುರಿತು ‘ಆನ್‌ಲೈನ್ ವಿಶೇಷ ಚರ್ಚಾಕೂಟ’ದಲ್ಲಿ ಅವರು ಮಾತನಾಡುತ್ತಿದ್ದರು.

ಈ ಕಾರ್ಯಕ್ರಮವನ್ನು ಸಮಿತಿಯ ಜಾಲತಾಣ Hindujagruti.org, ಯೂಟ್ಯೂಬ್ ಮತ್ತು ಟ್ವಿಟರ್‌ನಲ್ಲಿ 8,684 ಜನರು ವೀಕ್ಷಿಸಿದ್ದಾರೆ. ಈ ವಿಷಯದ ಬಗ್ಗೆ ದೇಶಭಕ್ತ ನಾಗರಿಕರು ಒಗ್ಗೂಡಿ ಟ್ವಿಟರ್‌ನಲ್ಲಿ #Facebook_Suppress_Hindu_Voices ಎಂಬ ಹೆಸರಿನ ನಡೆಸಿದ ಟ್ರೆಂಡ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಇದರಲ್ಲಿ 72 ಸಾವಿರ ಟ್ವೀಟ್‌ಗಳನ್ನು ಮಾಡುವ ಮೂಲಕ ನಾಗರಿಕರು ಫೇಸ್‌ಬುಕ್‌ಅನ್ನು ನಿಷೇಧಿಸಿದರು. ಈ ಅನ್ಯಾಯದ ನಿಷೇಧದ ವಿರುದ್ಧ 5000 ಜನರು ಆನ್‌ಲೈನ್ ಅರ್ಜಿಗೆ ಸಹಿ ಹಾಕಿದರು.

ಭಾರತ ಸರಕಾರವು ಈಗ ಫೇಸ್‌ಬುಕ್ ಮೇಲೆಯೇ ನಿರ್ಬಂಧ ಹೇರಬೇಕು ! - ಸನಾತನ ಸಂಸ್ಥೆ ಈ ಸಮಯದಲ್ಲಿ ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಮಾತನಾಡಿ, ‘ಟೈಮ್’ನಂತಹ ವಿದೇಶಿ ಮಾಧ್ಯಮಗಳು ವರದಿ ನೀಡಿತೆಂದು ಫೇಸ್‌ಬುಕ್ ಸನಾತನ ಸಂಸ್ಥೆ, ಸನಾತನ ಪ್ರಭಾತ ಮತ್ತು ಸನಾತನ ಶಾಪ್ ಸೇರಿದಂತೆ ಹಲವು ಫೇಸ್‌ಬುಕ್ ಪುಟಗಳನ್ನು ಮುಚ್ಚಿದೆ.

ಯಾವುದೇ ನಿಖರವಾದ ಕಾರಣವಿಲ್ಲದೆ ಭಾರತೀಯ ಸಂವಿಧಾನವು ಒದಗಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಆಯ್ದ ಪುಟಗಳನ್ನು ನಿರ್ಬಂಧಿಸುತ್ತಿದ್ದರೆ ಸರಕಾರವು ಫೇಸ್‌ಬುಕ್‌ಅನ್ನು ನಿಷೇಧಿಸಲೇಬೇಕು ಎಂದು ನಮ್ಮ ಬೇಡಿಕೆಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಭಾರತ ಜಾಗೃತಿ ಸೋಷಿಯಲ್ ನೆಟ್‌ವರ್ಕಿಂಗ್ ಗ್ಲೋಬಲ್ ಸೈಟ್’ನ ಸಂಸ್ಥಾಪಕ ಶ್ರೀ. ಭರತ ಭೂಷಣ ಇವರು, ಕೇವಲ ಹಿಂದೂ ಧರ್ಮದ ಪ್ರಸಾರ ಮಾಡುವ ಪುಟಗಳನ್ನು ಮಾತ್ರ ನಿಷೇಧಿಸಲಾಗುತ್ತದೆ, ಮತ್ತೊಂದೆಡೆ, ಕ್ರೈಸ್ತರ ಚಂಗೈ ಸಭೆಯ ಪುಟಗಳು ಯಾವುದೇ ಅಡೆತಡೆಯಿಲ್ಲದೆ ಮತಾಂತರಕ್ಕಾಗಿ ಕೆಲಸ ಮಾಡುತ್ತಿವೆ, ಎಂದರು.

‘ಹಿಂದೂ ಜನಜಾಗೃತಿ ಸಮಿತಿ’ಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯ ಸಂಘಟಕ ಶ್ರೀ. ಸುನೀಲ ಘನವಟ ಇವರು, ಡೇಟಾ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾ ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿರುವ ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್ ಇವರು ಲಷ್ಕರ್-ಎ-ತೋಯಿಬಾದಿಂದ ಅನೇಕ ಭಯೋತ್ಪಾದಕರು ಮತ್ತು ನಕ್ಸಲರ ಫೇಸ್‌ಬುಕ್ ಖಾತೆಗಳನ್ನು ಬಂದ್ ಮಾಡುವ ಧೈರ್ಯವನ್ನು ಮೊದಲು ತೋರಿಸಬೇಕು. ಹಣ ಸಂಪಾದಿಸಲು ಭಾರತಕ್ಕೆ ಬಂದಿರುವ ವಿದೇಶಿ ಸಂಸ್ಥೆಗಳು ನಮ್ಮ ವಿಚಾರ ಮತ್ತು ಬರವಣಿಗೆಯ ಸ್ವಾತಂತ್ರ್ಯದ ಮೇಲೆ ಹೇಗೆ ನಿಷೇಧ ಹೇರುತ್ತದೆ...?