ಲೋಕಲ್ ವ್ಯೂವ ನ್ಯೂಸ ಗೆ ವರ್ಷದ ಹರುಷಾ...
ನಾಡು, ನುಡಿ, ಜಲ ಕನ್ನಡದ ಹೋರಾಟಕ್ಕೆ ಹೆಸರು ವಾಸಿಯಾಗಿರುವ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಡೆಯುವ ಘಟನಾವಳಿಯ ಬಗ್ಗೆ ಬೆಳರ ತುದಿಯಲ್ಲಿ ಜನರಿಗೆ ಮಾಹಿತಿ ನೀಡುತ್ತಿರುವ ನಮ್ಮ ಸುದ್ದಿಯ ಮೂಲ ಲೋಕಲ್ ವ್ಯೂವ್ ಬಗ್ಗೆ ಒಂದಿಷ್ಟು ಮಾಹಿತಿ.
ಪ್ರತಿಯೊಂದು ಜಿಲ್ಲೆಯಲ್ಲಿಯೂ ಒಂದೊಂದು ವಿಶೇಷತೆ ಇರುತ್ತದೆ. ಅದನ್ನು ಜನರಿಗೆ ಕ್ಷಣಾರ್ಧದಲ್ಲಿ ತಲುಪಿಸಬೇಕೇನ್ನುವ ಉದ್ದೇಶದಿಂದ ಬೆಳಗಾವಿ ಲೋಕಲ್ ವ್ಯೂವ್ ವೆಬ್ ಸೈಟ್ ಆರಂಭಿಸಿ ವರ್ಷಗಳಲ್ಲಿಯೇ ಸಾಕಷ್ಟು ಓದುಗರು, ಹಿತೈಷಿಗಳು, ಸ್ನೇಹಿತರು ನಮ್ಮ ಲೋಕಲ್ ವ್ಯೂವ್ ನಲ್ಲಿ ಬರುವ ಮಾಹಿತಿಯನ್ನು ಬೇರೆಯವರಿಗೆ ಹಂಚಿಕೊಳ್ಳುತ್ತಿರುವುದು ನಮಗೆ ಹೆಮ್ಮೆ ಎನ್ನಿಸುತ್ತದೆ.
ಅಲ್ಲದೆ ಬೆಳಗಾವಿಯ ವಿವಿಧ ಮಠಾಧೀಶರು, ಸಾಹಿತಿಗಳು, ಪರಿಸರ ಪ್ರೇಮಿಗಳು, ರಾಜಕಾರಣಿಗಳು, ನಮ್ಮ ಪತ್ರಕರ್ತ, ಮಾಧ್ಯಮದ ಮಿತ್ರರು ನಮಗೆ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿರುವುದಕ್ಕೆ ಅವರಿಗೆ ನಮ್ಮ ಲೋಕಲ್ ವ್ಯೂವ್ ಅಭಾರವಾಗಿದೆ. ಜಿಲ್ಲೆಯಲ್ಲಿನ ಪ್ರತಿಯೊಂದು ಸಮಸ್ಯೆ, ಬಡವರ ಕಷ್ಟ, ಸಾರ್ವಜನಿಕರ ದೂರು ದುಮ್ಮಾನಗಳನ್ನು ನಿರ್ಭಯವಾಗಿ ಜನರಿಗೆ ತಿಳಿಸುವ ಕಾರ್ಯ ಮಾಡಿ ಸರಕಾರವನ್ನು ಎಚ್ಚರಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತೇವೆ.
ಲೋಕಲ್ ವ್ಯೂವ್ ವೆಬ್ ಸೈಟ್ ಸುದ್ದಿಯಲ್ಲಿ ಪ್ರೀತಿ, ಸ್ನೇಹ, ವಿಶ್ವಾಸ, ನಂಬಿಕೆ ಮತ್ತು ಪ್ರಾಮಾಣಿಕತೆಯೊಂದಿಗಿನ ಪರಸ್ಪರ ನ್ಯಾಯ ಸಮ್ಮತವಾದ ಸುದ್ದಿಗಳನ್ನು ಪ್ರಕಟಿಸುತ್ತ ಬಂದಿದೆ. ಬರುತ್ತದೆ. ನಮಗೆ ಜನರ ಸಮಸ್ಯೆ ಮುಖ್ಯ. ಜಾತಿ, ಧರ್ಮ, ಲಿಂಗ, ವಯೋಮಾನ ಬೇಧ, ಭಾವ ಮುಕ್ತ ಸುದ್ದಿ ಪ್ರಕಟಿಸುವುದೊಂದೆ ನಮ್ಮ ಗುರಿ.
ನಾನು ತುಂಬಾ ಸಣ್ಣ ವ್ಯಕ್ತಿ ಕೊನೆಯದಾಗಿ ನನ್ನದೊಂದು ಸಣ್ಣ ಮಾತು. ನಾನು ಎಂಬುದು ಹೆಸರು ಮಾತ್ರ. ಸಣ್ಣ ತಂಡವನ್ನು ಕಟ್ಟಿಕೊಂಡು ದೊಡ್ಡ ಸಮುದ್ರದಲ್ಲಿ ಇಜಲು ಹೊರಟ್ಟಿದ್ದೇನೆ. ನಮ್ಮ ಲೋಕಲ್ ವ್ಯೂವ್ ಏನೋ ಸಾಧನೆ ಮಾಡುತ್ತಿದೆ ಎಂದರೆ ಅದು ಬೆಳಗಾವಿ ಜನತೆಯ ಸಹಾಯ, ಸಹಕಾರ. ನಮ್ಮ ಸುದ್ದಿಗಳು ನಿಮಗೆ ಇಷ್ಟ ಆದರೆ ನಿಮ್ಮವರಿಗೂ ಕಳುಹಿಸಿ ಲೋಕಲ್ ವ್ಯೂವ್ ವೆ ಹಾರೈಸಿ.