ಸಿನಿ ಪ್ರೇಕ್ಷಕರಿಗೆ ನೆನಪು ಕಟ್ಟಿಕೊಟ್ಟು ಬಾರದ ಲೋಕಕ್ಕೆ ಸಂಚರಿಸಿದ ವಿಜಯ
ಬೆಂಗಳೂರು: ಸಂಚಾರಿ ವಿಜಯ್ ಸತ್ತಿಲ್ಲ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಅರುಣ್ ನಾಯ್ಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಂತೆ ಇಡೀ ಚಿತ್ರರಂಗವೇ ದುಃಖದ ಮಡುನಲ್ಲಿತ್ತು.
ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಆಪೋಲೋ ಆಸ್ಪತ್ರೆಯ ವೈದ್ಯ ಡಾ.ಅರುಣ್ ನಾಯ್ಕು ಅವರು ವಿಜಯ್ ಅವರ ಮೆದುಳು ಮಾತ್ರ ತನ್ನ ಕೆಲಸವನ್ನು ನಿಲ್ಲಿಸಿದೆ. ಆದರೆ ಅವರ ಹೃದಯ ಹಾಗೂ ಶ್ವಾಸಕೋಶ ಇನ್ನೂ ಕೆಲಸ ಮಾಡುತ್ತಿದೆ, ಮೆದುಳು ಕೆಲಸ ನಿಲ್ಲಿಸಿದ್ದ ವೇಳೆಯಲ್ಲಿ, ಉಳಿಯುವುದು ಅನುಮಾನ, ಹೀಗಾಗಿ ಅವರ ಹೃದಯ ಕೆಲಸ ನಿಲ್ಲಿಸಿದ ವೇಳೆಯಲ್ಲಿ ಸಾವನ್ನು ಘೋಷಣೆ ಮಾಡಲಾಗುವುದು ಎಂದು ಹೇಳಿದರು.
ನಾನು ಅವನಲ್ಲ.. ಅವಳು ಎಂಬ ಚಿತ್ರ ರಾಷ್ಟ್ರ ಪ್ರಶಸ್ತಿ ಬಾಚಿಕೊಂಡ ಸಿನಿಮಾ ಮೂಲಕ ವಿಭಿನ್ನ ಶೈಲಿಯಲ್ಲಿ ಚಿತ್ರರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದ ನಟ ಸಂಚಾರಿ ವಿಜಯ ಇನ್ನೂ ನೆನಪು ಮಾತ್ರ.