ಘಟಪ್ರಭಾ ನದಿಯ ನೀರಿನ ಮಟ್ಟ ಹೆಚ್ಚಳ : ಸೇತುವೆಗಳು ಜಲಾವೃತ
ಮೂಡಲಗಿ: ಅಂಬುಲಿ ಘಾಟ್ ಹಾಗೂ ಮಹಾರಾಷ್ಟçದಲ್ಲಿಯೂ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಘಟಪ್ರಭಾ ನದಿಗೆ ಹರಿದು ಬರುತ್ತಿರುವ ನೀರಿನಿಂದ ಬುಧವಾರದಂದು ಮೂಡಲಗಿ ತಾಲೂಕಿನಲ್ಲಿ ಸೇತುವೆಗಳು ಜಾಲಾವೃತಗೊಂಡಿವೆ.
ಕಳೆದ ಮೂರುನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಬಳ್ಳಾರಿ ನಾಲಾ ಹಾಗೂ ಹಿರಣ್ಯಕೇಶಿ ನದಿಯ ನೀರಿನ ಮಟ್ಟ ಹೆಚ್ಚಾಗಿ ಘಟಪ್ರಭಾ ನದಿಗೆ ನೀರು ಹರಿದು ಬರುತ್ತಿರುವ ಹಿನ್ನೆಲೆ ತಾಲೂಕಿನ ಸುಣಧೋಳಿ, ಕಮಲದಿನ್ನಿ, ಅವರಾದಿ ಸೇತುವೆಗಳಲ್ಲಿ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿವೆ, ಇದೇ ರೀತಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ತಾಲೂಕಿನ ಹುಣಶ್ಯಾಳ ಪಿ.ವೈ ಹಾಗೂ ಢವಳೇಶ್ವರ ಸೇತುವೆಗಳು ಮುಳುಗುವ ಸಾಧ್ಯತೆ ಇದೆ ಎಂದು ತಹಶೀಲ್ದಾರ ಡಿ.ಜಿ.ಮಾಹಾತ್ ತಿಳಿಸಿದ್ದಾರೆ.