Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸುಗಮ ಸಂಚರಕ್ಕೆ ಕೇಂದ್ರ ಸರ್ಕಾರದಿಂದ 10ಕೋಟಿ ರೂಪಾಯಿ ಬಿಡುಗಡೆಗೊಳಲಿಸಿದ ಸಂಸದ ಅನಂತಕುಮಾರ ಹೆಗಡೆ

localview news

ಬೆಳಗಾವಿ: ನೂತನವಾಗಿ ನಿರ್ಮಾಣವಾಗುತ್ತಿರುವ ಬೆಳಗಾವಿ- ಪಣಜಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಖಾನಾಪುರ ತಾಲೂಕಿನ ಹಳ್ಳಿಗಳ ಜನರ ಸುಗಮ ಸಂಚರಕ್ಕೆ ಕೇಂದ್ರ ಸರ್ಕಾರದಿಂದ 10ಕೋಟಿ ರೂಪಾಯಿ ಬಿಡುಗಡೆಗೊಳಲಿಸಿದ ಸಂಸದ ಅನಂತಕುಮಾರ ಹೆಗಡೆಯವರಿಗೆ ಹಾಗೂ ಕೇಂದ್ರ ಸರ್ಕಾರದ ಸಾರಿಗೆ ಸಚಿವರಾದ ನೀತಿನ ಗಡ್ಕರಿಯವರಿಗೆ ಬೆಳಗಾವಿ ಗ್ರಾಮಾಂತರ ಅಧ್ಯಕ್ಷ ಸಂಜಯ ಪಾಟೀಲ ಅಭಿನಂದನೆ ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ ಅವರುಗೋವಾ-ಕರ್ನಾಟಕ ರಾಜ್ಯಗಳ ನಡುವೆ ವಾಣಿಜ್ಯ ವಹಿವಾಟು ಹಾಗೂ ಪ್ರವಾಸೋದ್ಯಮದ ಉತ್ತೆಜನಕ್ಕಾಗಿ 2019 ರಲ್ಲಿ ಕೇಂದ್ರ ಸರ್ಕಾರ ಪ್ರಾರಂಭಿಸಿದ್ದ ಬೆಳೆಗಾವಿ-ಪಣಜಿ ಚತ್ಪುಶತ್ 150ಕಿಮೀ ಹೆದ್ದಾರಿ ರಸ್ತೆಯಲ್ಲಿ ಖಾನಾಪುರ ತಾಲೂಕಿನ ಹೊಣಕಲ್ ಗ್ರಾಮದಿಂದ ಉ.ಕನ್ನಡ ಜಿಲ್ಲೆಯ ಅನಮೊಡ್ ವರೆಗಿನ ರಸ್ತೆ ಸಂಪೂರ್ಣ ಅರಣ್ಯ ಪ್ರದೇಶದಲ್ಲಿ ಬರುವದರಿಂದ ಸರ್ವೋಚ್ಚ ನ್ಯಾಯಾಲಯ ಈ ಕಾಮಗಾರಿಗೆ ತಡೆಯಾಜ್ಞೆ ನೀಡಿತ್ತು ಇದರಿಂದ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದರ ಪರಿಣಾಮ ಖಾನಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಾಲೂಕಿನ ಗುಂಜಿ ಹೋಬಳಿಯ 40ಕ್ಕೂ ಹೆಚ್ಚಿನ ಗ್ರಾಮಗಳಿಗೆ ಸಂಚಾರಿ ರಸ್ತೆ ಇಲ್ಲದೆ ಜನ ಪರಿತಪಿಸುವಂತಾಗಿತ್ತು. ಈ ಸಮಸ್ಯೆಯನ್ನರಿತ ಉತ್ತರ ಕನ್ನಡದ ಸಂಸದರಾದ ಅನಂತ ಕುಮಾರ ಹೆಗಡೆಯವರ ಕೇಂದ್ರ ಸರ್ಕಾರದ ಸಾರಿಗೆ ಸಚಿವಾಲಯದಿಂದ ₹10ಕೋಟಿ ರೂಪಾಯಿ ಬಿಡುಗಡೆಗೊಳಿಸಿ ಗ್ರಾಮೀಣ ಪ್ರದೇಶಗಳಿಗೆ ತೆರಳಲು ರಸ್ತೆ ನಿರ್ಮಾಣದ ಕಾಮಾಗಾರಿಗೆ ಹಸಿರು ನಿಶಾನೆ ತೊರಿದ್ದಾರೆ ಎಂದರು.

ರಾಜ್ಯದಲ್ಲಿ 95ಕಿಮೀ ಹಾಗೂ ಗೋವಾರಾಜ್ಯದಲ್ಲಿ 55 ಕಿಮೀ ಇರುವ ಈ ಹೆದ್ದಾರಿಯ ಕಾಮಗಾರಿಗೆ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಮಂಗಳವಾರ ನ್ಯಾಯಾಲಯ ಹಿಂಪಡೆದಿದ್ದರಿಂದ ಅರ್ಧಕ್ಕೆ ನಿಂತಿದ್ದ ಹೆದ್ದಾರಿ ಕಾಮಗಾರಿ ಶಿಘ್ರದಲ್ಲಿ ಮರು ಪ್ರಾರಂಭವಾಗಲಿದ್ದು ಇದರಿಂದ ರಾಜ್ಯದಿಂದ ಗೋವಾ ರಾಜ್ಯಕ್ಕೆ ತೆರಳುವ ವಾಹನ ಸಂಚಾರದ ದಟ್ಟನೆಗೆ ಮುಕ್ತಿಯಾಗಲಿದೆ ಎಂದರು.

ಅರಣ್ಯ ಪ್ರದೇಶದಲ್ಲಿ ಬರುವ ರಸ್ತೆ ಕಾಮಗಾರಿಗೆ ತಡೆಯಾಜ್ಞೆ ನೀಡಿದ್ದ ಸರ್ವೋಚ್ಚ ನ್ಯಾಯಾಲಯ ಅರಣ್ಯರೆತರ ಪ್ರದೇಶದಲ್ಲಿ ಅರಣ್ಯ ಬೆಳೆಸುಲು ಕ್ರಮಕೈಗೊಳ್ಳುವ ಸೂಚನೆಯೊಂದಿಗೆ ಹಿಂಪಡೆದಿದ್ದರಿಂದ ಹಾಗೂ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 10ಕೋಟಿ ರೂಪಾಯಿ ಬಿಡುಗಡೆಗೊಂಡಿದ್ದರಿಂದ ಖಾನಾಪುರ ತಾಲೂಕಿನ ಗ್ರಾಮೀಣ ಪ್ರದೇಶದ ಜನತೆಯ ಸಂಚಾರದ ಕಷ್ಟ ಪರಿಹಾರವಾದಂತಾಗಿದೆ


ಜಿಲ್ಲಾ ಬಿಜೆಪಿ ವಕ್ತಾರ ಸಂಜಯ ಕಂಚಿ