ಸ್ವಿಸ ಬ್ಯಾಂಕುಗಳಲ್ಲಿನ ಭಾರತೀಯರ ನಿಧಿ 20,700 ಕೋಟಿ ರೂಗೆ ಏರಿಕೆ
ಭಾರತ ಮೂಲದ ಶಾಖೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳನ್ನೂ ಒಳಗೊಂಡಂತೆ ಸ್ವಿಸ್ ಬ್ಯಾಂಕುಗಳಲ್ಲಿನ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಹೂಡಿಕೆ ಮಾಡಿದ ಹಣವು 2020 ರಲ್ಲಿ 2.55 ಬಿಲಿಯನ್ ಸ್ವಿಸ್ ಫ್ರಾಂಕ್ಗಳಿಗೆ (20,700 ಕೋಟಿ ರೂ.ಗಳಿಗಿಂತಲೂ ಹೆಚ್ಚು) ಏರಿದೆ.
ಸೆಕ್ಯುರಿಟೀಸ್ ಮತ್ತು ಅಂತಹುದೇ ಸಾಧನಗಳ ಮೂಲಕ ಹಿಡುವಳಿಗಳ ತೀವ್ರ ಏರಿಕೆಯಾಗಿದೆ ಮತ್ತು ಇದು 13 ವರ್ಷ ಗಳಲ್ಲಿ ಅತೀ ಹೆಚ್ಚು ಹೂಡಿಕೆ ಎಂದು ಸ್ವಿಟ್ಜರ್ಲೆಂಡ ಕೇಂದ್ರ ಬ್ಯಾಂಕ ತನ್ನ ವಾರ್ಷಿಕ ಡೇಟಾವನ್ನು ಬಿಡುಗಡೆ ಮಾಡುವ ಮೂಲಕ ತಿಳಿಸಿದೆ.