ಆರು ಒಂಟೆಗಳನ್ನು ರಕ್ಷಿಸಿದ ಡಾ. ಸೋನಾಲಿ ಮತ್ತು ಬಾರ್ಕ್ ಸ್ವಯಂಸೇವಕರ ತಂಡ
ಬೆಳಗಾವಿಮನರಂಜನಾ ಉದ್ದೇಶಕ್ಕಾಗಿ 7 ಒಂಟೆಗಳನ್ನು ಬೆಳಗಾವಿಗೆ ತರಲಾಗಿತ್ತು ಮತ್ತು ಒಂಟೆಗಳನ್ನು ಮನರಂಜನೆಗಾಗಿ ಬಳುಸುವುದನ್ನು ಹೈಕೋರ್ಟ್ ನಿಷೇಧಿಸಿದೆ ಆದರೂ ಹೇಗಾದರೂ ಮಾಡಿ ಈ ಜನರು ಲಾಕ್ ಡೌನನ ಮೊದಲೆ ಒಂಟೆಗಳನ್ನು ಬೆಳಗಾವಿಗೆ ತಂದಿದ್ದರು.
ಲಾಕ್ ಡೌನನಲ್ಲಿ ಯಾವುದೇ ವ್ಯಾಪಾರವಿಲ್ಲದ ಕಾರಣ ಈ ಒಂಟೆಗಳು ಮತ್ತು ಅವುಗಳ ಮಾಲೀಕರು ಹಸಿವಿನಿಂದ ಬಳಲುತ್ತಿದ್ದರು. ಒಂದು ಒಂಟೆ ದೌರ್ಬಲ್ಯದಿಂದ ಸತ್ತುಹೋಗಿದೆ.
ಪ್ರಾಣಿಗಳ ಎನ್ಜಿಒ ಬಾರ್ಕ್ (ಬೆಲ್ಗಾಮ ಅನಿಮಲ್ ರೆಸ್ಕ್ಯೂ ಅಂಡ ಕೇರ್ ) ಸ್ವಯಂಸೇವಕರು ಇಂದು 6 ಒಂಟೆಗಳನ್ನು ಪುಣೆ ಎಪಿಎಂಸಿಗೆ ಒಂಟೆಗಳನ್ನು ಕ್ರೇನ್ನಿಂದ ಎತ್ತುವ ಮೂಲಕ ಖಾಸಗಿ ಸಾರಿಗೆಯಲ್ಲಿ ಕಳುಹಿಸಿದ್ದಾರೆ.
ಡಾ.ಸೋನಾಲಿ ಸರ್ನೋಬತ್ ಅವರು ಡಿಸಿ ಶ್ರೀ ಎಂ ಜಿ ಹಿರೆಮಠ್ ಅವರ ಸಹಕಾರಕ್ಕಾಗಿ ಮನವಿ ಮಾಡಿದರು .
ಬಾರ್ಕ್ ಸ್ವಯಂಸೇವಕರೊಂದಿಗೆ ಡಾ.ಸೋನಾಲಿ ಸರ್ನೋಬತ್ ಉಪಸ್ಥಿತರಿದ್ದರು.