ಪೃಥ್ವಿ ಸಿಂಗ್ ಫೌಂಡೇಶನ್ ಅಧ್ಯಕ್ಷ ಪೃಥ್ವಿ ಸಿಂಗ್ ಅವರ ಹುಟ್ಟು ಹಬ್ಬದ ನಿಮಿತ್ಯ ಆಹಾರ ಕಿಟ್ ವಿತರಣೆ
ಬೆಳಗಾವಿ: ಬಿಜೆಪಿ ಎಸಿ ಮೋರ್ಚಾ ರಾಜ್ಯ ಕಾರ್ಯಕರಣಿ ಸದಸ್ಯ ಪೃಥ್ವಿ ಸಿಂಗ್ ಪ್ರತಿಷ್ಠಾನದ ಅಧ್ಯಕ್ಷ ಪೃಥ್ವಿ ಸಿಂಗ್ ಅವರ ಹುಟ್ಟು ಹಬ್ಬದ ನಿಮಿತ್ಯ ಕಳೇಹೋಲ್ ಗ್ರಾಮದಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಆಚರಿಸಲಾಯಿತು. ಇನ್ನೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಆಹಾರ ಕಿಟ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪೃಥ್ವಿ ಸಿಂಗ್ ಫೌಂಡೇಶನ್ನ ಜಸ್ವೀರ್ ಸಿಂಗ್, ಬಹುಜನ ಯುವ ಸಂಘಟನೆಯ ಯಲ್ಲಪ್ಪ ಕಾಂಬಳೆ, ಪಾಂಡುರಾಂಗ್ ಕಾಂಬಳೆ, ಗಣೇಶ್ ಮಾಸ್ತೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.