Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸೌಥಾಂಪ್ಟನ್​ನಲ್ಲಿ ಮಳೆಯದ್ದೇ ಆಟ

localview news
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟ ಇಂದು ನಡೆಯಲಿದೆ. ನಿನ್ನೆ (ಜೂನ್ 20) ಭಾರತ 217 ರನ್‌ಗಳಿಗೆ ಆಲ್ ಔಟ್ ಆಗಿತ್ತು. ಆ ಬಳಿಕ, ಬ್ಯಾಟಿಂಗ್‌ಗೆ ಇಳಿದ ನ್ಯೂಜಿಲ್ಯಾಂಡ್ 2 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿತ್ತು. ಮೊದಲ ದಿನದಾಟ ಮಳೆಯ ಕಾರಣದಿಂದ ರದ್ದಾಗಿತ್ತು. ಎರಡನೇ ದಿನ ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಅಡ್ಡಿಪಡಿಸಿತ್ತು. ಮೂರನೇ‌ ದಿನವಾದ ನಿನ್ನೆ ಮಳೆಯಿಂದ ಸ್ವಲ್ಪ ಅಡ್ಡಿಯಾದರೂ ಬಹುತೇಕ ಪೂರ್ತಿ ದಿನ ಪಂದ್ಯ ನಡೆದಿತ್ತು. ಹಾಗಾಗಿ, ಪಂದ್ಯದ ಎಲ್ಲಾ ನಿರೀಕ್ಷೆಗಳಿಗೂ ಮೀರಿ ಕ್ರಿಕೆಟ್ ಅಭಿಮಾನಿಗಳಿಗೆ ಹವಾಮಾನದ ಅಡ್ಡಿಯಿಲ್ಲದೆ, ಪಂದ್ಯ ನಡೆಯಲಿ ಎಂಬ ಆಶಯವೇ ಹೆಚ್ಚಾಗಿದೆ. ಪಂದ್ಯ ಆರಂಭವಾದರೆ, ಭಾರತೀಯ ಬೌಲರ್​ಗಳು ನ್ಯೂಜಿಲ್ಯಾಂಡ್ ದಾಂಡಿಗರ ವಿಕೆಟ್ ಉರುಳಿಸುವುದು ಅನಿವಾರ್ಯವಾಗಿದೆ.ಮಳೆಯಿಂದಾಗಿ ಸೌಥಾಂಪ್ಟನ್ ಮೈದಾನ ಸಪ್ಪೆಯಾಗಿ ಕಾಣುತ್ತಿದೆ. ಭಾರತ ಹಾಗೂ ನ್ಯೂಜಿಲ್ಯಾಂಡ್ ಕ್ರಿಕೆಟ್ ಅಭಿಮಾನಿಗಳ ಸಂಭ್ರಮ ಕೇಳಬೇಕಿದ್ದ ಮೈದಾನ ಮಳೆಯಿಂದ ಮೌನವಾಗಿದೆ. ನಾಲ್ಕನೇ ದಿನದಾಟ ಹೇಗೆ ಸಾಗಲಿದೆ, ಮಳೆ ಬಿಡಬಹುದಾ ಎಂದು ಕಾದುನೋಡಬೇಕಿದೆ.