ಗೋಕಾಕ್ ಶ್ರೀಗಳ ಜನ್ಮ ದಿನಕ್ಕೆ ಶುಭ ಕೋರಿದ ಪ್ರೀಯಾಂಕಾ ಜಾರಕಿಹೊಳಿ
ಬೆಳಗಾವಿ: ಗೋಕಾಕದ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಅವರು ಇಂದು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳಿಗೆ ಶುಭ ಕೋರಿ, ಆಶೀರ್ವಾದ ಪಡೆದರು.
ಪ್ರಿಯಾಂಕಾ ಅವರು ಜನ್ಮದಿನದ ಅಂಗವಾಗಿ ಸ್ವಾಮೀಜಿಗಳನ್ನು ಸತ್ಕರಿಸಿ, ಗೌರವ ಸಲ್ಲಿಸಿದರು. ಸ್ವಾಮೀಜಿಗಳು ಕೂಡ ಪ್ರಿಯಾಂಕಾ ಅವರನ್ನು ಆತ್ಮೀಯತೆಯಿಂದ ಬರಮಾಡಿಕೊಂಡು, ಆಶೀರ್ವಾದ ಮಾಡಿದರು.