ಪಾಕಿಸ್ತಾನದ ವಿನಂತಿಗಳಿಗೆ ಮನಿಯದ ಎಫಏಟಿಎಫ
ಪಾಕಿಸ್ತಾನ ತನ್ನ ಕ್ರಿಯಾಯೋಜನೆಯನ್ನು ಕಾರ್ಯಗತಗೊಳಿಸಬೇಕಾಗಿರುವುದರಿಂದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF)ನಲ್ಲಿ ಗ್ರೇ ಪಟ್ಟಿಯಲ್ಲಿಯೇ ಉಳಿದಿದೆ . ಅಕ್ಟೋಬರ್ 17 ರಿಂದ ಅಕ್ಟೋಬರ್ 22 ರವರೆಗೆ ನಡೆಯಲಿರುವ ಮುಂದಿನ ಎಫ್ಎಟಿಎಫ್ ಸಮಗ್ರ ಸಭೆ ನಡೆಯುವವರೆಗೆ ದೇಶವು ಸಂಪೂರ್ಣ ಅನುಷ್ಠಾನಕ್ಕೆ ಶ್ರಮಿಸಬೇಕಾಗುತ್ತದೆ.
ಗ್ರೇ ಪಟ್ಟಿಯಲ್ಲಿರುವುದು ದೇಶದಲ್ಲಿನ ಹಣವನ್ನು ಭಯೋತ್ಪಾದನೆಗೆ ಬಳಸಲಾಗುತ್ತಿದೆ ಎಂದು ಸಂಕೇತವಾಗಿದೆ. ಇದು ವಿದೇಶಿ ಹೂಡಿಕೆಯ ಹರಿವಿನ ಮೇಲೆ ಕೂಡಾ ಪರಿಣಾಮ ಬೀರುತ್ತದೆ. ಪಾಕಿಸ್ತಾನವನ್ನು ಜೂನ್ 2018 ರಲ್ಲಿ ಎಫ್ಎಟಿಎಫ್ ಗ್ರೇ ಪಟ್ಟಿಯಲ್ಲಿ ಸೇರಿಸಿತ್ತು.
ಪಾಕಿಸ್ತಾನ ಸರ್ಕಾರದ ಅಂದಾಜಿನ ಪ್ರಕಾರ ಎಫ್ಎಟಿಎಫ್ನಲ್ಲಿ ಪಾಕಿಸ್ತಾನವನ್ನು ಗ್ರೇಲಿಸ್ಟ್ ಮಾಡುವುದರಿಂದ ದೇಶಕ್ಕೆ ವಾರ್ಷಿಕವಾಗಿ ಸುಮಾರು 10 ಬಿಲಿಯನ್ ನಷ್ಟವಾಗುತ್ತಿದೆ ಎಂದು ತಿಳಿಸಿದೆ.
ಏನಿದು ಎಫಏಟಿಎಫ...?
ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ,ಗ್ರೂಪ್ ಡಿ ಆಕ್ಷನ್ ಫೈನಾನ್ಷಿಯರ್ ಎಂದೂ ಕರೆಯಲ್ಪಡುತ್ತದೆ, ಇದು ಮನಿ ಲಾಂಡರಿಂಗನ್ನು ಎದುರಿಸಲು ನೀತಿಗಳನ್ನು ಅಭಿವೃದ್ಧಿಪಡಿಸಲು ಜಿ 7ನ ಉಪಕ್ರಮದ ಮೇಲೆ 1989 ರಲ್ಲಿ ಸ್ಥಾಪಿಸಲಾದ ಒಂದು ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.
ಎಫಏಟಿಎಫನಲ್ಲಿ ಭಾರತದ ಪಾತ್ರ...!
ಭಾರತವು 2006ರಿಂದ ಎಫ್ಎಟಿಎಫ್ನಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವಕ್ಕಾಗಿ ಕೆಲಸ ಮಾಡುತ್ತಿತ್ತು ಮತ್ತು ಜೂನ್ 25, 2010 ರಂದು ಭಾರತವನ್ನು ಎಫ್ಎಟಿಎಫ್ನ 34 ನೇ ಸದಸ್ಯ ದೇಶವಾಗಿ ಸೇರಿಸಲಾಗಿದೆ.