Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಜುಲೈ 2021ರ ಬ್ಯಾಂಕ್ ರಜಾದಿನಗಳು: ಇಲ್ಲಿದೆ ಮಾಹಿತಿ

localview news

ಕೋವಿಡ್-19 ಪ್ರೇರಿತ ರಾಜ್ಯಗಳ ಲಾಕ್‌ಡೌನ್ ನಿರ್ಬಂಧಗಳ ನಡುವೆ ಜೂನ್ ತಿಂಗಳಿನಲ್ಲಿ ಹೆಚ್ಚಿನ ಬ್ಯಾಂಕ್ ರಜಾದಿನಗಳು ಇರಲಿಲ್ಲ. ಆದರೆ ಮುಂಬರುವ ಜುಲೈ ತಿಂಗಳಿನಲ್ಲಿ ಭಾರತದಾದ್ಯಂತದ ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಮುಚ್ಚಲ್ಪಡುತ್ತವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಕೃತ ರಜಾದಿನದ ಪಟ್ಟಿಯಲ್ಲಿ ವಿವಿಧ ರಾಜ್ಯಗಳ ವಿವಿಧ ಹಬ್ಬಗಳಿಗೆ ಒಂಬತ್ತು ರಜಾದಿನಗಳು ಸೇರಿವೆ, ಇದರ ನಡುವೆ ಆರು ಸಾಮಾನ್ಯ ವಾರಾಂತ್ಯದ ರಜಾದಿನಗಳಾಗಿವೆ.ಹೀಗಾಗಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾದರೆ, ಅದಕ್ಕೂ ಮೊದಲು ನೀವು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಬೇಕು.

ಜುಲೈ ತಿಂಗಳಲ್ಲಿ ಯಾವೆಲ್ಲಾ ದಿನಗಳು ರಜೆ ಇರಲಿದೆ ಎಂಬ ಮಾಹಿತಿ ಈ ಕೆಳಗಿದೆ.

ಜುಲೈ 2021ರ ರಜಾದಿನಗಳು (ಆಯಾ ರಾಜ್ಯಗಳಿಗೆ ಸಂಬಂಧಪಟ್ಟಂತೆ)

4 ಜುಲೈ 2021: ಭಾನುವಾರ

10 ಜುಲೈ 2021: ಎರಡನೇ ಶನಿವಾರ

11 ಜುಲೈ 2021: ಭಾನುವಾರ

12 ಜುಲೈ 2021: ಸೋಮವಾರ - ಕಂಗ್ (ರಾಜಸ್ಥಾನ),

ರಥ ಯಾತ್ರ (ಭುವನೇಶ್ವರ, ಇಂಪಾಲ್)

13 ಜುಲೈ 2021: ಮಂಗಳವಾರ - ಭಾನು ಜಯಂತಿ (ಮೂರ್ತಿ ದಿನ- ಜಮ್ಮು ಮತ್ತು ಕಾಶ್ಮೀರ, ಭಾನು ಜಯಂತಿ- ಸಿಕ್ಕಿಂ)

14 ಜುಲೈ 2021: ಡ್ರುಕ್ಪಾ ತ್ಸೆಚಿ (ಗ್ಯಾಂಗ್ಟಾಕ್)

16 ಜುಲೈ 2021 - ಗುರುವಾರ - ಹರೇಲಾ ಪೂಜಾ (ಡೆಹ್ರಾಡೂನ್)

17 ಜುಲೈ 2021 - ಖಾರ್ಚಿ ಪೂಜಾ (ಅಗರ್ತಲಾ, ಶಿಲ್ಲಾಂಗ್)

18 ಜುಲೈ 2021 - ಭಾನುವಾರ

21 ಜುಲೈ 2021 - ಮಂಗಳವಾರ - ಈದ್ ಅಲ್ ಅಧಾ (ದೇಶದಾದ್ಯಂತ)

24 ಜುಲೈ 2021 - ನಾಲ್ಕನೇ ಶನಿವಾರ

25 ಜುಲೈ 2021 - ಭಾನುವಾರ

31 ಜುಲೈ 2021- ಶನಿವಾರ - ಕೆರ್ ಪೂಜಾ (ಅಗರ್ತಲಾ).