Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಘಟಪ್ರಭಾದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ಜಿಲ್ಲಾ ಅಧ್ಯಕ್ಷ ಅರ್ಜುನ ಅವರಿಂದ ಸಭೆ

localview news

ಬೆಳಗಾವಿ: ಕರ್ನಾಟಕ ಸಮತಾ ಸೈನಿಕ ದಳ ಕಾರ್ಯಾಲಯದಲ್ಲಿ ಇಂದು ಬೆಳಗಾವಿ ಜಿಲ್ಲಾ ಅಧ್ಯಕ್ಷರು ಅರ್ಜುನ ಗಂಡವಗೋಳ ಹಾಗೂ ಸಂಘದ ತಾಲೂಕಾ ಪದಾಧಿಕಾರಿಗಳಾದ ರವಿ ಅರ್ಜುನವಾಡ ಮತ್ತು ರಮೇಶ ಕಡಹಟ್ಟಿ ಅವರ ನೇತೃತ್ವದಲ್ಲಿ ಗೋಕಾಕ ಮೂಡಲಗಿ ಚಿಕ್ಕೋಡಿ ಹುಕ್ಕೇರಿ ರಾಯಬಾಗ ನಿಪ್ಪಾಣಿ ಕಾಗವಾಡ ಅಥಣಿ ತಾಲೂಕು ಘಟಕಗಳ ಪ್ರತಿ ತಾಲೂಕು ಮತ್ತು ಗ್ರಾಮದಲ್ಲಿ ಉದ್ಘಾಟ ನಿಮಿತ್ಯ ಸಭೆ ನಡೆಸಲಾಯಿತು.

ಹಾಗೂ ಲಾಕ್ಡೌನ್ ನಿಮಿತ್ತವಾಗಿ ಕಾರ್ಯಕ್ರಮ ಸ್ಥಗಿತಗೊಂಡಿದ್ದರಿಂದ ಇವತ್ತಿನಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ಮತ್ತು ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಗ್ರಾಮಗಳಲ್ಲಿ ಕರ್ನಾಟಕ ಸಮತಾ ಸೈನಿಕ ದಳ ಹೆಚ್ಚಿನ ಗ್ರಾಮಗಳಲ್ಲಿ ಸ್ಥಾಪನೆ ಮಾಡಲಾಗುವುದು ಈ ಸಂಘಟನೆ ನ್ಯಾಯ ಬದ್ದವಾಗಿ ದಿನ ದಲಿತರಿಗೆ ಬರುವ ಸೌಲಭ್ಯಕ್ಕಾಗಿ ಹೋರಾಟ ವನ್ನು ಮಾಡುತ್ತದೆ ಮತ್ತು ದಲಿತರ ಮೇಲೆ ಆಗುವ ಅನ್ಯಾಯಗಳನ್ನು ತಡೆಗಟ್ಟುತ್ತದೆ ಬುದ್ಧ ಬಸವ ಅಂಬೇಡ್ಕರ ತತ್ವದಲ್ಲಿ ನಡೆಯುತ್ತೆವೆ ಎಂದು ಹೇಳಿದರು.

ಎಲ್ಲಾ ತಾಲೂಕಾ ಪದಾಧಿಕಾರಿಗಳು ಹಾಗೂ ಗ್ರಾಮ ಪದಾಧಿಕಾರಿಗಳು ಸಂಘಟನೆ ಬೆಳೆಸಬೇಕೆಂದು ಕರ್ನಾಟಕ ಸಮತಾ ಸೈನಿಕ ದಳ ಜಿಲ್ಲಾ ಅಧ್ಯಕ್ಷರು ಅರ್ಜುನ ಗಂಡವಗೋಳ ಮತ್ತು ಪದಾಧಿಕಾರಿಗಳು ಇವತ್ತಿನ ಸಭೆಯಲ್ಲಿ ಹೇಳಿದರು.