Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಸಂಕಷ್ಟಿ ಚತುರ್ಥಿಯ ನಿಮಿತ್ಯ ಸ್ವಯಂಭು ಶ್ರೀ ವರಸಿದ್ಧಿ ವಿನಾಯಕ ಮಂದಿರಕ್ಕೆ ಭೇಟಿದ ಸಂಸದೆ ಮಂಗಳಾ ಅಂಗಡಿ

localview news

ಬೆಳಗಾವಿ: ಸಂಕಷ್ಟಿ ಚತುರ್ಥಿಯ ನಿಮಿತ್ಯ ಬೆಳಗಾವಿಯ ಮಾರ್ಕಂಡೇಯ ನಗರದ (ಎಪಿಎಂಸಿ) ಸ್ವಯಂಭು ಶ್ರೀ ವರಸಿದ್ಧಿ ವಿನಾಯಕ ಮಂದಿರಕ್ಕೆ ಭೇಟಿ ನೀಡಿದ ಸಂಸದೆ ಮಂಗಳಾ ಅಂಗಡಿ ಅವರು ದೇವರಿಗೆ ವಿಶೇಷ ಪೂಜೆ ಕೈಗೊಂಡು ಪ್ರಾರ್ಥನೆ ಸಲ್ಲಿಸಿದರು. ಸಂದರ್ಭದಲ್ಲಿ ಸ್ಥಳೀಯ ಹಿರಿಯ ನಾಗರಿಕರು, ದೇವಸ್ಥಾನದ ಅರ್ಚಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪಕ್ಷದ ಕಾರ್ಯಕರ್ತರೆಲ್ಲರೂ ಸೇರಿ, ಬೆಳಗಾವಿ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾದ ಹಿನ್ನೆಲೆ ಸನ್ಮಾನಿಸಿ, ಅಭಿನಂದಿಸಿದರು. ಎಲ್ಲಾ ಪ್ರೀತಿ ಪಾತ್ರರಿಗೆ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಮಲ್ಲಿಕಾರ್ಜುನ ಸತ್ತಿಗೇರಿ, ಶ್ರೀಮತಿ ಆಶಾ ಸತ್ತಿಗೇರಿ, ಶ್ರೀ ಮಲ್ಲಿಕಾರ್ಜುನ ಹಲ್ದಾರ ಮಠ, ಶ್ರೀ ಪ್ರವೀಣ್ ಬಿಡಿಕಾರ್, ಶ್ರೀ ಗೋಜಾನನ, ಮೆಂಡಕೆ, ರವಿ ಹಿರೇಮಠ, ಎ.ಕೆ. ಪಾಟೀಲ್, ರಾಜು ಬಾಳೆಕುಂದ್ರಿ, ಶ್ರೀಮತಿ ಸುಗಂಧಾ ಭರ್ಮಾ ಪಾಟೀಲ್, ಶ್ರೀಮತಿ ಗೀತಾ ಕುಗಾಜಿ, ಶ್ರೀಮತಿ ಪಾವಳೆ, ಶ್ರೀಮತಿ ಕಾಟೆ, ಶ್ರೀಮತಿ ಪೋಟೆ, ಶ್ರೀ ದಾದಾಗೌಡ ಬಿರಾದಾರ, ಶ್ರೀ ಆದರ್ಶ ನೂಲಿ, ಶ್ರೀ ಸಂತೋಷ್ ಬೋರ್ಕರ್, ಸ್ಥಳೀಯ ಗಣ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.