Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಿಜೆಪಿ ಯುವ ಮೋರ್ಚಾ ಸವದತ್ತಿ ಮಂಡಲದ ಮುನವಳ್ಳಿಯಲ್ಲಿ ಹರಿಯುವ ಮಲಪ್ರಭಾ ನದಿಯ ದಡದ ಸ್ವಚ್ಛತೆ ಕಾರ್ಯ

localview news

ಬೆಳಗಾವಿ; ಜಲ ಮೂಲಗಳ ಸ್ವಚ್ಛತೆ ಬಿಜೆಪಿ ಯುವ ಮೋರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಸವದತ್ತಿ ಮಂಡಲದ ಮುನವಳ್ಳಿಯಲ್ಲಿ ಹರಿಯುವ ಮಲಪ್ರಭಾ ನದಿಯ ದಡದ ಸ್ವಚ್ಛತೆ ಮಾಡುವ ಪ್ರಯತ್ನ ಮಾಡಿದರು.

ನದಿಗಳಲ್ಲಿ ಎಸೆದ ಬಟ್ಟೆ,ಪ್ಲಾಸ್ಟಿಕ್,ಸೀಸೆಗಳು,ಫೋಟೋ ಇನ್ನಿತರ ವಸ್ತುಗಳನ್ನು ಹೊರ ತೆಗೆಯುವ ಪುಟ್ಟ ಪ್ರಯತ್ನ ಬಿಜೆಪಿ ಯುವ ಮೋರ್ಚಾ ವತಿಯಿಂದ ನಡೆಯಿತು.

ನಂತರ ಜಲಮೂಲಗಳ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಜಾಗೃತಿ ಕುರಿತು ಚಿಂತನೆ ,ಪ್ರತಿ ತಿಂಗಳು ಈ ಕಾರ್ಯ ನಡೆಸುವ ಸಂಕಲ್ಪ ಸವದತ್ತಿ ಮಂಡಲ BJYM ಮಾಡಿತು.

ಈ ಸಂದರ್ಭದಲ್ಲಿ ರಾಜ್ಯ BJYM ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ,ರಾಜ್ಯ BJYM ಉಪಾಧ್ಯಕ್ಷ ರಾಜಕುಮಾರ ಸಾಗಾಯಿ,ಕಾರ್ಯಕಾರಿಣಿ ಸದಸ್ಯ ಶ್ರೇಯಸ್ ನಾಕಾಡಿ,ಜಿಲ್ಲಾ ಅಧ್ಯಕ್ಷ ಬಸವರಾಜ ನೇಸರಗಿ,ಮಂಡಲ ಅಧ್ಯಕ್ಷ ಬಸವರಾಜ ಸಾಲಿಮಠ,ಪ್ರಧಾನ ಕಾರ್ಯದರ್ಶಿಗಳಾದ ಹನಸಿ,ವೀರೇಶ್,ಪುರಸಭೆ ಅಧ್ಯಕ್ಷರಾದ ವಿಜಯ ಅಮಟೆ ಇನ್ನಿತರರು ಉಪಸ್ಥಿತರಿದ್ದರು.