ಚಚಡಿ ಗ್ರಾಮದ ದೇವಸ್ಥಾನಕ್ಕೆ ಭೂಮಿ ಪೂಜೆ
ಹೊಸೂರ: ಸಮೀಪದ ಚಚಡಿ ಗ್ರಾಮದ ಗುಂಡ್ಲೂರ ಬಸವೇಶ್ವರ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ 5ಲಕ್ಷ ರೂಪಾಯಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದು ಸೋಮವಾರ ಗುಂಡ್ಲೂರ ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಬಿಜೆಪಿ ಮುಖಂಡ ಮುರಿಗೆಪ್ಪ ಗುಂಡ್ಲೂರ ನೆತೃತ್ವದಲ್ಲಿ ಗ್ರಾಮಸ್ಥರು ಭೂಮಿ ಪೂಜೆ ನೆರವೆರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಯಶವಂತ ಕರಾಡೆ, ಸಿದ್ದನಗೌಡ ಪಾಟೀಲ, ರಾವಸಾಹೇಬ ದೇಸಾಯಿ, ಮಹಾಂತೇಶ ಗಿರಜನ್ನವರ, ಮಹಾಂತಯ್ಯ ಹಿರೇಮಠ, ಗುರುಶಾಂತಯ್ಯ ಚರಲಿಂಗಮಠ, ಗುರುಸಿದ್ದಪ್ಪ ಮೇಟಿ,ಮಂಜುನಾಥ ಹಲ್ಯಾಳ,ಚಿನ್ನಪ್ಪ ಮೇಟಿ, ಗ್ರಾಪಂ ಸದಸ್ಯರು ಹಿರಿಯರು ಟ್ರಸ್ಟ್ ಸದಸ್ಯರು ಇದ್ದರು