Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕೋವಿಶೀಲ್ಡ ಲಸಿಕೆ ಹಾಕಿಸಿಕೊಂಡವರಿಗೆ ಪ್ರವೇಶ ನಿಷೇದ:ಯುರೋಪಿಯನ ಒಕ್ಕೂಟ

localview news

ಯುರೋಪ ಕೋವಿಶೀಲ್ಡ ಲಸಿಕೆಯನ್ನು ಯುರೋಪಿಯನ್ ಒಕ್ಕೂಟದ 'ಡಿಜಿಟಲ್ ಕೋವಿಡ್ ಪ್ರಮಾಣಪತ್ರ'ದಿಂದ ಹೊರ ತೆಗೆಯಲಾಗಿದೆ.

ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ಆವೃತ್ತಿಯಾದ ಕೋವಿಶೀಲ್ಡ್ ಲಸಿಕೆಯನ್ನು ಯುರೋಪಿಯನ್ ಮಾರುಕಟ್ಟೆ ಇಎಂಎ ಅನುಮೋದಿಸಿಲ್ಲ ಎಂದು ತಿಳಿದು ಬಂದಿದೆ. ಇ ಕಾರಣದಿಂದ ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಗೆ (ಇಎಂಎ) ಅನುಮೋದನೆ ನೀಡಲು ಸೀರಮ್ ಅರ್ಜಿ ಸಲ್ಲಿಸಿದೆ.

ಕೋವಿಶೀಲ್ಡ ಲಸಿಕೆ ಹಾಕಿದ ಪ್ರಯಾಣಿಕರು ಜುಲೈ 1 ರಿಂದ ಯುರೋಪಿಯನ್ ಒಕ್ಕೂಟದ 'ಗ್ರೀನ್ ಪಾಸ್'ಗೆ ಅರ್ಹತೆ ಹೊಂದಿರುವುದಿಲ್ಲ ಎಂದು ವರದಿ ಆಗಿದೆ .

ಅನೇಕ ಇಯು ಸದಸ್ಯ ರಾಷ್ಟ್ರಗಳು ಡಿಜಿಟಲ್ "ಲಸಿಕೆ ಪಾಸ್ಪೋರ್ಟ್" ಅನ್ನು ನೀಡಲು ಪ್ರಾರಂಭಿಸಿವೆ, ಇದು ಯುರೋಪಿಯನ್ನಲ್ಲಿ ಕೆಲಸ ಮಾಡಲು ಅಥವಾ ಪ್ರವಾಸೋದ್ಯಮಕ್ಕಾಗಿ ಮುಕ್ತವಾಗಿ ಪ್ರಯಾಣ ಮಾಡಲು ಅನುವು ಮಾಡಿಕೊಡುತ್ತದೆ.

ಮತ್ತೊಂದೆಡೆ ಇಎಂಎ-ಅನುಮೋದಿತ ಲಸಿಕೆಗಳಲ್ಲಿ ಒಂದನ್ನು ಲಸಿಕೆ ಹಾಕಿಸಿ ಕೊಂಡವರಿಗೆ ಸುಲಭವಾಗಿ ಫ್ರಾನ್ಸ್ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಫ್ರಾನ್ಸ್ ಸ್ಪಷ್ಟಪಡಿಸಿದೆ ಹಾಗು ರಷ್ಯಾ ಮತ್ತು ಭಾರತೀಯ ಲಸಿಕೆಗಳಂತೆ ಇತರೆ ಲಸಿಕೆ ಹಾಕಿಸಿಕೊಂಡವರಿಗೆ ಅನುಮತಿ ದೊರೆಯುವುದು ಕಠಿಣವಾಗಿದೆ.