Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಕರ್ನಾಟಕ ಸೇರಿ 16 ರಾಜ್ಯದ ಗ್ರಾಮಗಳಿಗೆ ಹೈ ಸ್ಪೀಡ್ ಇಂಟೆರನೆಟ ಒದಗಿಸಲು ಸಜ್ಜಾದ ಕೇಂದ್ರ

localview news

ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಭಾರತ್‌ನೆಟ ಪರಿಷ್ಕೃತ ಅನುಷ್ಠಾನ ಕಾರ್ಯತಂತ್ರ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ಈ ರಾಜ್ಯಗಳಲ್ಲಿ ಭಾರತ್‌ನೆಟ ಪ್ರತಿ ಗ್ರಾಮಗಳಿಗೂ ವಿಸ್ತರಿಸಲಿದೆ ಮತ್ತು ಪರಿಷ್ಕೃತ ಕಾರ್ಯತಂತ್ರವು ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಬಿಡ್ಡಿಂಗ್ ಪ್ರಕ್ರಿಯೆಯಿಂದ ಆಯ್ಕೆಯಾಗುವ ಗುತ್ತಿಗೆದಾರರಿಂದ ಭಾರತ್‌ನೆಟ್ ರಚನೆ, ಉನ್ನತೀಕರಣ, ಕಾರ್ಯಾಚರಣೆ, ನಿರ್ವಹಣೆ ಮತ್ತು ಬಳಕೆಯನ್ನು ಒಳಗೊಂಡಿದೆ.

ಇಂದು ಸಂಪುಟ ಸಭೆಯಲ್ಲಿ ಅನುಮೋದನೆಗೆ ಒಳಪಟ್ಟ ರಾಜ್ಯಗಳೆಂದರೆ ಕರ್ನಾಟಕ, ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ಮಣಿಪುರ, ಮಿಜೋರಾಂ, ತ್ರಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ. ಈ ರಾಜ್ಯಗಳ ಗ್ರಾಮ ಪಂಚಾಯ್ತಿಗಳು ಸೇರಿದಂತೆ ಅಂದಾಜು 3.61 ಲಕ್ಷ ಗ್ರಾಮಗಳು ಇ ಯೋಜನೆಗೆ ಒಳಗೊಳ್ಳುತ್ತವೆ.

ಎಲ್ಲಾ ಜನವಸತಿ ಗ್ರಾಮಗಳಿಗೆ ವಿಶ್ವಾಸಾರ್ಹ, ಗುಣಮಟ್ಟದ, ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಸೇವೆಯನ್ನು ಭಾರತ್‌ನೆಟ್ ಒದಗಿಸುತ್ತದೆ ಮತ್ತು ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು ನೀಡುವ ಇ-ಸೇವೆಗಳನ್ನು ಉಪಯೋಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಭಾರತ್‌ನೆಟ್ ಪಿಪಿಪಿ ಮಾದರಿ ಈ ಕೆಳಗಿನ ಗ್ರಾಹಕ ಸ್ನೇಹಿ ಅನುಕೂಲಗಳನ್ನು ಒದಗಿಸುತ್ತದೆ :
(ಎ)ಗ್ರಾಹಕರಿಗೆ ಖಾಸಗಿ ವಲಯದ ಪೂರೈಕೆದಾರರಿಂದ ಹೊಸ ತಂತ್ರಜ್ಞಾನದ ಮಾಹಿತಿ.
(ಬಿ)ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಮತ್ತು ಸೇವಾ ಮಟ್ಟ ಹೆಚ್ಚಿಸುತ್ತದೆ
(ಸಿ)ವೇಗವಾಗಿ ನೆಟ್‌ವರ್ಕ್ ನಿಯೋಜನೆ ಮತ್ತು ಗ್ರಾಹಕರಿಗೆ ತ್ವರಿತ ಸಂಪರ್ಕ ಓದಗೀಸುತ್ತದೆ.
(ಡಿ)ಸ್ಪರ್ಧಾತ್ಮಕ ದರಗಳನ್ನು ನೀಡುತ್ತದೆ
(ಇ)ಗ್ರಾಹಕರಿಗೆ ನೀಡುವ ಪ್ಯಾಕೇಜ್‌ಗಳ ಭಾಗವಾಗಿ ಓವರ್ ದಿ ಟಾಪ್ (ಒಟಿಟಿ) ಸೇವೆಗಳು ಮತ್ತು ಬಹು-ಮಾಧ್ಯಮ ಸೇವೆಗಳು ಸೇರಿದಂತೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್‌ನಲ್ಲಿನ ವಿವಿಧ ಸೇವೆಗಳು ಮತ್ತು ಎಲ್ಲಾ ಆನ್‌ಲೈನ್ ಸೇವೆಗಳಿಗೆ ಪ್ರವೇಶ ಒದಗಿಸುತ್ತದೆ.

ದೂರಸಂಪರ್ಕ ಕ್ಷೇತ್ರದ ಮೂಲಸೌಕರ್ಯದಲ್ಲಿ ಈ ಪಿಪಿಪಿ ಮಾದರಿಯು ಒಂದು ಹೊಸ ಉಪಕ್ರಮವಾಗಿದೆ. ಆದ್ದರಿಂದ, ಭಾರತ್‌ನೆಟ್ ಪಿಪಿಪಿ ಮಾದರಿಯು ಡಿಜಿಟಲ್ ಇಂಡಿಯಾದ ಸಾಧನೆಯನ್ನು ವೇಗಗೊಳಿಸಲು ದಕ್ಷತೆ, ಸೇವೆಯ ಗುಣಮಟ್ಟ, ಗ್ರಾಹಕರ ಅನುಭವ ಮತ್ತು ಖಾಸಗಿ ವಲಯದ ಪರಿಣತಿ, ಉದ್ಯಮಶೀಲತೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇದು ಸಾರ್ವಜನಿಕ ಹಣದ ಗಣನೀಯ ಉಳಿತಾಯಕ್ಕೂ ಕಾರಣವಾಗುತ್ತದೆ.