ಹೊಸ ಟೆಕ್ನಾಲಜಿಗಳೊಂದಿಗೆ ಲಗ್ಗೆ ಇಟ್ಟ ಮಹಿಂದ್ರಾ ಎಕ್ಸ್ಯುವಿ 7OO
ಎಕ್ಸ್ಯುವಿ 7OO ಡೀಸೆಲ್ ಮತ್ತು ಗ್ಯಾಸೋಲಿನ್ ಎಂಜಿನ್ಗಳಲ್ಲಿ ಮ್ಯಾನುಯಲ್ ಮತ್ತು ಸ್ವಯಂಚಾಲಿತ ವಿಧದಲ್ಲಿ ಲಭ್ಯವಾಗಲಿದ್ದು, ಆಲ್-ವೀಲ್-ಡ್ರೈವ್ ಆಯ್ಕೆ ಲಭ್ಯವಿರುತ್ತದೆ ಎಂದು ಮಹಿಂದ್ರಾ ತಿಳಿಸಿದೆ.
ಮಹೀಂದ್ರಾ ಎಕ್ಸ್ಯುವಿ 7OO ವೈಯಕ್ತಿಕ ಧ್ವನಿ ಸಂದೇಶದ ಮೂಲಕ ಅಧಿಕ ವೇಗದಲ್ಲಿ ಚಲಾಯಿಸುವಾಗ ವಾಯ್ಸ ಅಲರ್ಟ್ ಮೂಲಕ ಎಚ್ಚರಿಕೆಗಳನ್ನು ನೀಡುತ್ತದೆ.
ವಾಹನವು 80 ಕಿ.ಮೀ ವೇಗವನ್ನು ಮೀರಿದಾಗ ಆಟೋ ಬೂಸ್ಟರ್ ಹೆಡ್ಲ್ಯಾಂಪ್ಗಳು ಸ್ವಯಂಚಾಲಿತವಾಗಿ ಆನ್ ಆಗುತ್ತವೆ ಮತ್ತು ಹೆಚ್ಚಿನ ಸುರಕ್ಷತೆ ಒದಗಿಸಲು ವಾಹನವು ಹೆಚ್ಚುವರಿ ದೀಪಗಳನ್ನು ಆನ್ ಮಾಡುತ್ತದೆ ಮಹಿಂದ್ರಾ ಬಹಿರಂಗ ಪಡಿಸಿದೆ.
ಮಹೀಂದ್ರಾ ಎಕ್ಸ್ಯುವಿ 7OO ಏಳು ಸೀಟ್ ಹೊಂದ್ದಿದ್ದು ಪವರ್ ವಿಂಡೋಗಳು, ಪನೋರಮಿಕ್ ಸನ್ರೂಫ್, ಹೊಂದಾಣಿಕೆ ಮಾಡಬಹುದಾದ ಸ್ಟೀರಿಂಗ್ ವೀಲ್ ಮತ್ತು ಸ್ವಯಂಚಾಲಿತ ಏಸಿ ಹೊಂದಿರುವ ಅದ್ಬುತ ಕ್ಯಾಬಿನ್ ಹೊಂದಿದೆ. ಇದರ ಬೆಲೆ ರೂ.14 ರಿಂದ 16 ಲಕ್ಷ ವರೆಗೆ ಅಂದಾಜಿಸಲಾಗಿದೆ.