ಪಾಲಿಕೆ ಮುಂದೆ ಕನ್ನಡದ ಬಾವುಟ ಬದಲಾವಣೆ ಹೋರಾಟಗಾರರನ್ನು ಬಂಧಿಸಿ ಬಿಡುಗಡೆ ಮಾಡಿದ ಪೊಲೀಸರು
ಬೆಳಗಾವಿ:ಮಹಾನಗರ ಪಾಲಿಕೆ ಎದುರು ಅಳವಡಿಸಲಾಗಿದ್ದ ಕನ್ನಡ ಬಾವುಟ ಬದಲಾವಣೆ ಮಾಡುವಂತೆ ಕೋವಿಡ್ ನಿಯಮ ಉಲ್ಲಂಘಿಸಿ ಪಟ್ಟು ಹಿಡಿದಿದ್ದ ಕನ್ನಡ ಹೋರಾಟಗಾರರನ್ನು ಮಾರ್ಕೆಟ್ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ಕಳೆದ ಮೂರು ತಿಂಗಳಿನಿಂದ ಪಾಲಿಕೆ ಎದುರು ಅಳವಡಿಸಲಾದ ಕನ್ನಡ ಬಾವುಟ ಹರಿದಿದ್ದು, ಅದನ್ನು ಬದಲಾವಣೆ ಮಾಡವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರೂ ಬದಲಾವಣೆ ಮಾಡಿಲ್ಲ. ಕೂಡಲೇ ಬದಲಾವಣೆ ಮಾಡಬೇಕೆಂದು ಸ್ಥಳದಲ್ಲಿ ಪಟ್ಟು ಹಿಡಿದರು. ಸ್ಥಳದಲ್ಲಿದ್ದ ಪೊಲೀಸರು ಬದಲಾವಣೆ ಮಾಡುತ್ತೇವೆ ಎಂದರೂ ಕೇಳದ ಕನ್ನಡ ಹೋರಾಟಗಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆಯನ್ನು ಪ್ರತಿಭಟನೆಯಲ್ಲಿ ಮಾಡಿದ್ದಾರೆ.