ಬ್ಯಾಂಕನಲ್ಲಿ ಎಫಡಿ ಅಥವಾ ಟಿಡಿ ಮಾಡಿದ್ದೀರಾ...? ಹಾಗಾದರೆ ಈ ಸುದ್ದಿ ನೀವು ಓದಲೇ ಬೇಕು
ಟರ್ಮ್ ಠೇವಣಿ (ಟಿಡಿ) / ಸ್ಥಿರ ಠೇವಣಿ (ಎಫ್ಡಿ) ಅವಧಿ ಮುಕ್ತಾಯಗೊಂಡಿದ್ದು ಆ ಹಣ ಬ್ಯಾಂಕಿನಲ್ಲಿಯೇ ಉಳಿದ್ದರೆ ಅಥವಾ ರಿನೀವಲ ಮಾಡಿಸದೇ ಇದ್ದರೆ ಅಂತಹ ಮೊತ್ತದ ಬಡ್ಡಿಗೆ ಸಂಬಂಧಿಸಿದಂತೆ ಆರಬಿಐ ಮಹತ್ವದ ಪ್ರಕಟಣೆ ನೀಡಿದೆ.
ಏನಿದು ಹೊಸ ನಿಯಮ...?
ಹೊಸ ನಿಯಮಗಳ ಪ್ರಕಾರ ಎಫಡಿ/ಟಿಡಿ ಅವಧಿ ಮುಕ್ತಾಯವಾಗಿದ್ದು ಮತ್ತು ರಿನೀವಲ ಮಾಡಿಸದೆ ಇದ್ದರೆ ಅಥವಾ ಬ್ಯಾಂಕಿನಲ್ಲಿಯೇ ಉಳಿದಿದ್ದರೆ ಹಂತಹ ಮೊತ್ತವು ಉಳಿತಾಯ ಖಾತೆಗೆ ಅನ್ವಯವಾಗುವ ಬಡ್ಡಿದರವನ್ನು ಹೊಂದುತ್ತದೆ ಎಂದು ಆರಬಿಐ ತಿಳಿಸಿದೆ.
ಈ ಹೊಸ ನಿಯಮ ಎಲ್ಲಾ ನಿಗದಿತ ವಾಣಿಜ್ಯ ಬ್ಯಾಂಕಗಳು (ಆರ್ಆರ್ಬಿ ಸೇರಿದಂತೆ), ಸಣ್ಣ ಹಣಕಾಸು ಬ್ಯಾಂಕುಗಳು, ಸ್ಥಳೀಯ ಪ್ರಾದೇಶಿಕ ಬ್ಯಾಂಕುಗಳು ಮತ್ತು ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ಅನ್ವಯಿಸುತ್ತದೆ ಎಂದು ಕೆಳಗೆ ನಮೂದಿಸಿದ ನೋಟಿಸ್ನಲ್ಲಿ ಆರಬಿಐ ಉಲ್ಲೇಖಿಸಿದೆ.