Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಜುಲೈ ತಿಂಗಳಲ್ಲಿ ಡೆಂಗೀ ವಿರೋಧಿ ಮಾಸಾಚರಣೆ

localview news

ಬೆಳಗಾವಿ:ರಾಷ್ಟ್ರೀಯ ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 2021 ನೇ ಸಾಲಿನ ಡೆಂಗೀ ವಿರೋಧಿ ಮಾಸಾಚರಣೆ ಯು ಜುಲೈ ತಿಂಗಳಲ್ಲಿ ಆಚರಿಸಲಾಗುತ್ತದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಮ್.ಎಸ್.ಪಲ್ಲೇದ್ ತಿಳಿಸಿದ್ದಾರೆ.

ಡೆಂಗಿ ಜ್ವರ ವೈರಸನಿಂದ ಉಂಟಾಗುವ ಕಾಯಿಲೆ ಯಾಗಿದ್ದು, ಸೊಂಕು ಹೊಂದಿದ ಈಡಿಸ್ ಇಜೆಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಬೆಳೆಯುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ.

ಡೆಂಗೀಜ್ವರ ಹರಡದಂತೆ ತಡೆಯಲು ಮುಂಜಾಗೃತಾ ಕ್ರಮಗಳು:ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರಕೂಲರ್, ಇತ್ಯಾದಿಗಳನ್ನು ತಪ್ಪದೆ ವಾರಕ್ಕೊಮ್ಮೆ ಖಾಲಿಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳಬೇಕು.

ನೀರು ಕಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳಲ್ಲಿ ಸೊಳ್ಳೆಗಳು ನುಸುಳದಂತೆ ಸರಿಯಾಗಿ ಮುಚ್ಚಳದಿಂದ ಮುಚ್ಚುವುದು.

ಮನೆಯ ಸುತ್ತ ಮುತ್ತಲಿನ ತ್ಯಾಜ್ಯ ವಸ್ತುಗಳಾದ ಟೈರು, ಎಳನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆಯ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿ ಇಲ್ಲ ಸೂಕ್ತ ವಿಲೇವಾರಿ ಮಾಡುವುದು.

ನೀರಿನ ಅಭಾವ ಇರುವ ಸಂದರ್ಭಗಳಲ್ಲಿ ಶೇಖರಿಸಲ್ಪಟ್ಟ ನೀರನ್ನು ಸೋಸಿ ಮತ್ತೆ ಸ್ವಚ್ಛಗೊಳಿಸಿ ನೀರನ್ನು ಬಳಸಬಹುದು.

ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು.

ಮನೆಯ ಕಿಟಕಿ, ಬಾಗಿಲುಗಳಿಗೆ ಜಾಲರಿಗಳನ್ನು ಅಳವಡಿಸಿಕೊಳ್ಳುವುದು. ಸೊಳ್ಳೆಯ ಮರಿಗಳನ್ನು ಆಹಾರವಾಗಿ ಉಪಯೋಗಿಸುವ ಲಾರ್ವಾ ಹಾರಿ ಮೀನುಗಳಾದ ಗ್ಯಾಂಬೋಸಿಯ ಮತ್ತು ಗಪ್ಪಿ ಎಂಬ ಮೀನುಗಳನ್ನು ನಿಂತ ನೀರಿನ ತಾಣಗಳಲ್ಲಿ ಬೆಳೆಸಿರಿ.ಉಚಿತ ಕರೆಗಾಗಿ ದೂರವಾಣಿ ಸಂಖ್ಯೆ 104 ನ್ನು ಸಂಪರ್ಕಿಸಿ.

ಡೆಂಗೀಜ್ವರ ಮತ್ತು ಚಿಕುನ್ ಗುನ್ಯ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದ್ದು, ಡೆಂಗೀ ಗುಣಲಕ್ಷಣಗಳು ಕಂಡು ಬಂದಾಗ, ರಕ್ತದಲ್ಲಿರುವ ಪ್ಲೇಟಲೈಟ್ ಗಳ ಕೊರತೆಯಾಗವುದೆಂಬ ವದಂತಿ ಜನಸಾಮಾನ್ಯರಲ್ಲಿ ಹರಡಿದೆ.

ಆದರೆ, ಪ್ಲೇಟ್ ಲೈಟ್ ಕಡಿಮೆಯಾದ ರೋಗಿಗಳಿಗೆ ವೈದ್ಯರು ನೀಡುವ ಒ.ಆರ್.ಎಸ್ ದ್ರಾವಣದಿಂದ ತಕ್ಷಣ ಪ್ಲೇಟ್ ಲೈಟ್ ಗಳ ಪ್ರಮಾಣ ಹೆಚ್ಚಾಗಿ ರೋಗಿ ಚೇತರಿಸಿಕೊಳ್ಳುತ್ತಾನೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಮ್.ಎಸ್.ಪಲ್ಲೇದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.