Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಬಿಮ್ಸ್ ಅಭಿವೃದ್ಧಿಗಾಗಿ ಉದ್ಯಮಿಗಳಿಂದ 11.46 ಲಕ್ಷ ರೂಪಾಯಿ ಕೊಡುಗೆ

localview news

ಬೆಳಗಾವಿ: ಪ್ರಾದೇಶಿಕ ಆಯುಕ್ತರು ಹಾಗೂ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಬಿಮ್ಸ್) ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿಗಳಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ಮನವಿಯ ಮೇರೆಗೆ ಜಿಲ್ಲೆಯ ವಿವಿಧ ಉದ್ಯಮಿಗಳು ಬಿಮ್ಸ್ ಅಭಿವೃದ್ಧಿಗೆ ಉದಾರ ನೆರವು ನೀಡಿದ್ದಾರೆ.

ಬಿಮ್ಸ್ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ಕಾಗಿ ಗುರುವಾರ (ಜುಲೈ.8) ವಿವಿಧ ಉದ್ಯಮಿಗಳು ಒಟ್ಟಾರೆ ರೂ .11.46 ಲಕ್ಷ ಕೊಡುಗೆಯನ್ನು ನೀಡಿದರು.

 • ಶ್ರೀನಿವಾಸ ಇಂಡಕ್ಷನ ಹಾರ್ಡೆನಿಂಗ,ಬೆಳಗಾವಿ :ರೂ. 1,00,000.
 • ಶಾಂತಿ ಫೌಮಾಕ ಪ್ರೈವೇಟ ಲಿಮಿಟೆಡ್ :-ರೂ.2,00,000.
 • ಬೆಳಗಾಂ ಆಕ್ವಾ ವಾಲ್ವ್ಸ್ ಪ್ರೈವೇಟ ಲಿಮಿಟೆಡ್ :ರೂ25, 000.
 • ಕ್ವಾಲಿಟಿ ಅನಿಮಲ್ ಫೀಡ್ :ರೂ 50, 000.
 • ಮಿಲೇನಿಯಮ ಸ್ಟ್ರಾಚ ಇಂಡಿಯಾ ಪ್ರೈವೇಟ ಲಿಮಿಟೆಡ್ : ರೂ 50,000.
 • ಹೈಡ್ರೊ ಪ್ಯಾಕ್ ಇಂಡಿಯಾ ಪ್ರೈವೇಟ ಲಿಮಿಟೆಡ್:ರೂ 25,000.
 • ಎಕ್ಸ್ಪರ್ಟ್ ವಾಲ್ವ ಅಂಡ್ ಇಕ್ವಿಪ್ಮೆಂಟ್ ಪ್ರೈವೇಟ ಲಿಮಿಟೆಡ್:ರೂ 10,000.
 • ಹಿಂಡಾಲ್ಕೋ ಇಂಡಸ್ಟ್ರೀಸ್ ಎಲಟಿಡಿ :ರೂ 1,00,000.
 • ಏಕೆಪಿ ಫೆರ್ರೋಕ್ಯಾಸ್ಟ್ ಪ್ರೈವೇಟ ಲಿಮಿಟೆಡ್:1,00,000.
 • ಏಕೆಪಿ ಫೌಂಡ್ರಿಸ್ ಪ್ರೈವೇಟ ಲಿಮಿಟೆಡ್:ರೂ 50,000.
 • ಸರ್ವೋ ಕಂಟ್ರೊಲ್ಸ್ ಅಂಡ್ ಹೈಡ್ರಾಲಿಕ್ಸ್ ಪ್ರೈವೇಟ ಲಿಮಿಟೆಡ್: ರೂ 25,000.
 • ಆರಇಸಿ ಫ್ಲೋ ಟೆಕ್ನಾಲಾಜಿಸ್ LLP:ರೂ 50,000.
 • ಹೈಲೊಕ್ ಹೈಡ್ರೊಟೆಕನಿಕ ಪ್ರೈವೇಟ ಲಿಮಿಟೆಡ್:ರೂ 1, 50,000.
 • ಏಇಪಿ ಪ್ರಾಡಕ್ಟ್ಸ್ ಪ್ರೈವೇಟ ಲಿಮಿಟೆಡ್ :ರೂ 10,000.
 • ಬೆಳಗಾವಿ ಡಿಸ್ಟ್ರಿಕ್ಟ್ ಆಟೋಮೊಬೈಲ ಅಸೋಸಿಯೇಷನ್ :ರೂ 95,000.
 • ಬೆಳಗಾಂ ಡಿಸ್ಟ್ರಿಕ್ಟ ಕ್ವಾರಿ ಓನರ್ಸ್ ಅಸೋಸಿಯೇಷನ್:ರೂ 1,06,000.

ಒಟ್ಟು 11,46,000 ಲಕ್ಷ ಸ್ವೀಕರಿಸಲಾಯಿತು. ಕೊಡುಗೆ ಸ್ವೀಕರಿಸಿದ ಮಾತನಾಡಿದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು, ಬಿಮ್ಸ್ ಅಭಿವೃದ್ಧಿಗೆ ಉದ್ಯಮಿಗಳು ಕಳಕಳಿಯಿಂದ ಕೊಡುಗೆ ನೀಡಿರುವುದು ಪ್ರಶಂಶನೀಯ. ಈ ಹಣವನ್ನು ಬಿಮ್ಸ್ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಲಾಗುವುದು ಎಂದು ಹೇಳಿದರು.

ವೈದ್ಯಕೀಯ ಸಂಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಉದ್ಯಮಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಬಿಮ್ಸ್ ಸಂಸ್ಥೆಯ ಪ್ರಭಾರ ನಿರ್ದೆಶಕರಾದ ಡಾ. ಉಮೇಶ ಕೆ. ಕುಲಕರ್ಣಿ ಹಾಗೂ ಮುಖ್ಯ ಆಡಳಿತಾಧಿಕಾರಿಗಳು ಎಸ್.ಎಸ್, ಬಳ್ಳಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.