ಶೂರತ್ವ ಸಾರುವ ಹೆಣ್ಣು ದೇಶಕ್ಕೆ ಮಾದರಿ: ನಿರ್ಮಲಾ ಬಟ್ಟಲ
ಬೆಳಗಾವಿ:ಅನೇಕ ಸಾಕ್ಷ್ಯಾಧಾರಗಳ ಉಲ್ಲೇಖದ ಮುಲಕ ಅಂದಿನ ಕಾಲದ ಮಹಿಳೆಯರ ಸೈನ್ಯ ಕಟ್ಟಿ ಹೋರಾಡಿದ ವನಿತೆಯರಲ್ಲಿ ಗಟ್ಟಿತನವನ್ನು ಎತ್ತಿ ತೋರಿಸುತ್ತದೆ ಎಂದು ಉಪನ್ಯಾಸ ಮಾಲಿಕೆಯ ಉಪನ್ಯಾಸಕಿ ಡಾ. ನಿರ್ಮಲಾ ಬಟ್ಟಲ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳ ಸಹಯೋಗದೊಂದಿಗೆ ರವಿವಾರ (ಜು.11)"ರಾಣಿಯರು ಮೆಟ್ಟಿದ ನಾಡು" ಗೂಗಲ್ ಮೀಟ್ ನ ವೆಬಿನಾರ ಮೂಲಕ ನಡೆದ ಉಪನ್ಯಾಸ ಮಾಲಿಕೆ-2 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
’ಮಹಿಳೆ ಅಬಲೆಯಲ್ಲ ಸಬಲೆ’ ಎನ್ನುವುದನ್ನು ಈ ನಾಡಿನ ವೀರ ಮಹಿಳೆಯರು ತೋರಿಸಿಕೊಟ್ಟಿದ್ದು, ಮಹಿಳಾ ಸೈನ್ಯ ಕಟ್ಟಿದ ಕೀರ್ತಿಯು ನಮ್ಮ ದೇಶಕ್ಕೆ ಹೆಮ್ಮೆ ಎಂದು ಹೇಳುವ ಮುಲಕ ಬೆಳವಡಿ ಮಲ್ಲಮ್ಮನ ಕುರಿತು ಹೆಚ್ಚು ಹೆಚ್ಚು ಚಿಂತನೆಗಳು ಜರುಗಿ ನೈಜ ಇತಿಹಾಸ ಬರಬೇಕಿದೆ ಎಂದು ಹೇಳಿದರು.
ರಾಜಗುರು ಸಂಸ್ಥಾನ ಕಲ್ಮಠ ಮಡಿವಾಳ ರಾಜಯೋಗೀಂದ್ರ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ರಾಣಿಯರಲ್ಲಿ ಧರ್ಮ ಸಹಿಷ್ಣುತೆಯು ರಾಜರ ಶಕ್ತಿಯನ್ನು ಮೇಲೆತ್ತರಕ್ಕೆ ತಂದಿದ್ದು, ಬೆಳವಾಡಿ ಮಲ್ಲಮ್ಮ, ಕಿತ್ತೂರು ಚೆನ್ನಮ್ಮನಂತ ರಾಣಿಯರು ದೇಶಕ್ಕೆ ಮಾದರಿಯಾಗಿದ್ದಾರೆ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಲಾ ಮೆಟಗುಡ್ಡ ಮಾತನಾಡಿ ಐತಿಹಾಸಿಕ ಮತ್ತು ಸಾಹಿತ್ಯಿಕ ಚಟುವಟಿಕೆ ಪ್ರಸರಣ ಮಾಡುತ್ತಿರುವ ಕಿತ್ತೂರು ಕಸಾಪದ ಕಾರ್ಯ ವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರ ಯ.ರು ಪಾಟೀಲ, ಉದಯ ಕುಲಕರ್ಣಿ, ಎಂ.ವೈ. ಮೆಣಸಿನಕಾಯಿ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬಾದಾಮಿ, ವಿಜಯ ಬಡಿಗೇರ, ಬಸವರಾಜ ಗಾರ್ಗಿ, ಡಾ. ಎಸ್.ಬಿ ಉಕ್ಕಲಿ, ಶಿವಾನಂದ, ಮೋಹನ್, ಹೇಮಾವತಿ, ಪಾಂಡುರಂಗ, ಗೌರಾದೇವಿ, ಸುನಂದಾ, ಶಂಕರಯ್ಯ, ಅಕ್ಷಯ, ಅವಳೆಕುಮಾರ, ವಿದ್ಯಾವತಿ, ಅನ್ನಪೂರ್ಣ, ರಜನಿ ಸೇರಿದಂತೆ 70 ಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಸಾಪ ದ ಅಧ್ಯಕ್ಷರಾದ ಡಾ. ಶೇಖರ ಹಲಸಗಿ ಸಂಯೋಜಿಸಿ, ನಿರ್ವಹಿಸಿದರು. ಡಾ.ಎಸ್.ಬಿ ದಳವಾಯಿ ಸ್ವಾಗತಿಸಿದರು, ಎಂ.ಎಸ್ ಕಲ್ಮಠ ವಂದಿಸಿದರು.