Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪದ್ಮಶ್ರೀ ಪ್ರಶಸ್ತಿಗೆ ಅಭಿನಯ ಬ್ರಹ್ಮ ಅನಂತನಾಗರವರ ಹೆಸರು ಶುಚಿಸಲು ಕರೆ:ರಿಷಬ ಶೆಟ್ಟಿ

localview news

ದೇಶದ ಅತ್ಯುನ್ನತ ಗೌರವಗಳಾದ ಪದ್ಮ ಪ್ರಶಸ್ತಿಗಳಿಗೆ ಮುಂದಿನ ವರ್ಷ ಅಂದರೆ 2022ರ ಸಾಲಿನಲ್ಲಿ ಯಾರು ಭಾಜನರಾಗಬೇಕೆಂಬ ಆಯ್ಕೆಯನ್ನು ಮಾನ್ಯ ಪ್ರಧಾನಿಗಳು ಜನತೆಗೆ ನೀಡಿರುವುದು ಪ್ರಶಂಸನೀಯ ನೆಡೆ. ಸರ್ಕಾರದ ಬದಲಾಗಿ ದೇಶದ ಪ್ರಜೆಗಳೇ ಪ್ರಶಸ್ತಿಗೆ ತೀರ್ಪುಗಾರರಾಗಬೇಕು ಎಂಬುದು ಇದರ ಹಿಂದಿನ ಉದ್ದೇಶ.

ಅರ್ಹ ಪ್ರತಿಭೆಗಳ ಕೈ ಸೇರಿದಾಗಲೇ ಪ್ರಶಸ್ತಿಗಳಿಗೆ ಶೋಭೆ ನಮ್ಮಲ್ಲಿ ಅಂತಹ ಹಲವಾರು ಬೃಹತ್‌ ಪ್ರತಿಭೆಗಳಿಗೆ ಕೊರತೆಯಿಲ್ಲ. ಈ ನಾಡು ಕಂಡ ಅತ್ಯಂತ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾದ ಹಿರಿಯ ನಟ, ಶ್ರೀಯುತ ಅನಂತನಾಗ್ ಕೂಡ ಅಂತಹ ಮಹಾನ್ ಪ್ರತಿಭೆಗಳಲ್ಲಿ ಒಬ್ಬರು. ಒಬ್ಬ ಚಿತ್ರನಟರಾಗಿ, ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ಇವರು ನೀಡಿರುವ, ನೀಡುತ್ತಲಿರುವ ಕೊಡುಗೆ ಚಿರಸ್ಮರಣೀಯ. ಎಂಥಹ ಪಾತ್ರಗಳೇ ಆಗಲಿ, ಲೀಲಾಜಾಲವಾಗಿ ಅಭಿನಯಿಸಿ, ಚಿತ್ರರಸಿಕರ ಮನಗೆಲ್ಲುತ್ತಾ ಬಂದಿರುವ ಈ “ಅಭಿನಯ ಬ್ರಹ್ಮನಿಗೆ ಪದ್ಮಪ್ರಶಸ್ತಿಯೊಂದು ಸಲ್ಲಬೇಕಾದದ್ದು ನ್ಯಾಯವೇ ಸರಿ.

ಅದಕ್ಕಾಗಿ ನಾವೆಲ್ಲರೂ ಅನಂತನಾಗ್‌ರವರನ್ನು ಒಂದುಗೂಡಿ, #PeoplesPadma ನಮ್ಮ ನಾಡಿನ ನಾಮನಿರ್ದೇಶಿಸೋಣಾ. ಸೆಪ್ಟೆಂಬರ್ 15ರ ವರೆಗೂ ಸಮಯವಿದ್ದು, ಅಲ್ಲಿಯವರೆಗೂ #AnanthnagFor Padma ಎಂಬ ಹ್ಯಾಷ್ ಟ್ಯಾಗ್ ಬಳಸುವ ಮೂಲಕ ಎಲ್ಲರೂ ಇದಕ್ಕೆ ಬೆಂಬಲ ಸೂಚಿಸೋಣಾ ಎಂದು ರಿಷಬ್ ಶೆಟ್ಟಿ ಕೇಳಿಕೊಂಡಿದ್ದಾರೆ.