Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಚಂದನಹೊಸೂರು ದೇವಸ್ಥಾನಕ್ಕೆ ಚೆಕ್ ಹಸ್ತಾಂತರಿಸಿದ ಲಕ್ಷ್ಮಿ ಹೆಬ್ಬಾಳಕರ್

localview news

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಚಂದನಹೊಸೂರ ಗ್ರಾಮದ ಗ್ರಾಮ ದೇವತೆ ಶ್ರೀ ಲಕ್ಷ್ಮೀ ದೇವಿಯ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶಾಸಕರ ನಿದಿಯಿಂದ 6.40 ಲಕ್ಷ ರೂ,ಗಳನ್ನು ನೀಡಲು ನಿರ್ಧರಿಸಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮೊದಲ ಕಂತಿನಲ್ಲಿ 3 ಲಕ್ಷ ರೂ,ಗಳ ಚೆಕ್ಕನ್ನು ದೇವಸ್ಥಾನದ ಕಮೀಟಿಯವರಿಗೆ ಶುಕ್ರವಾರ ಸಂಜೆ ಹಸ್ತಾಂತರಿಸಿದರು.

ಕ್ಷೇತ್ರದ ಎಲ್ಲ ದೇವಸ್ಥಾನಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗುತ್ತಿದೆ. ಕ್ಷೇತ್ರದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕೆಲಸಗಳಿಗೆ ಒತ್ತು ನೀಡಲಾಗುತ್ತಿದೆ. ಈ ಗ್ರಾಮದ ಸುತ್ತಮುತ್ತಲಿನ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿಪಡಿಸಿದ್ದು, ಇನ್ನೂ ಹತ್ತಾರು ಕೆಲಸಗಳನ್ನು ಮಾಡಿಸುವ ಆಶಾ ಭಾವನೆಯನ್ನು ಹೊಂದಿದ್ದೇನೆ. ನಿಮ್ಮ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾಕಾಲವೂ ಹೀಗೆಯೇ ಇರಲಿ ಎಂದು ಹೆಬ್ಬಾಳಕರ್ ವಿನಂತಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಗ್ರಾಮ ಪಂಚಾಯತ್ ಉಪಾದಕ್ಷರು, ಸದಸ್ಯರು, ದೇವಸ್ಥಾನ ಟ್ರಸ್ಟ್ ಕಮೀಟಿಯವರು, ಮಹೇಶ ಹಿರೇಮಠ ಸ್ವಾಮೀಜಿ, ರಾಯಪ್ಪ ತವಗದ, ಸದೆಪ್ಪ ತಾನಸಿ, ನಾಗಲಿಂಗ ಬಡಿಗೇರ, ಶಿವನಪ್ಪ ಪಾಟೀಲ, ಅಡಿವೆಪ್ಪ ಪಾಟೀಲ, ಕಲ್ಲಪ್ಪ ಕುಂದರಗಿ, ನಾಗನಗೌಡ ಪಾಟೀಲ, ವೀರಭದ್ರ ಕರಡಿಗುದ್ದಿ, ಬಸವರಾಜ ಕರಡಿಗುದ್ದಿ, ಕೆಂಪಣ್ಣ, ಶಿವಲಿಂಗ ಕರಬಣ್ಣವರ, ಕಲ್ಮೇಶ ಪಾರ್ವತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.