Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಪೊಲೀಸ್ ಇಲಾಖೆಯಲ್ಲಿ ಸಂಖ್ಯಾ ಬಲ ಹೆಚ್ಚಿಸಿ

localview news

ಬೆಳಗಾವಿ:ಪೊಲೀಸ್ 112 ಅಗತ್ಯ ಸೇವೆಗಾಗಿ 1289 ಲಕ್ಷ ರೂ. ವೆಚ್ಚ ಮಾಡಿದ ಸರಕಾರ ನೇಮಕಾತಿ ಮೂಲಕ ಪೊಲೀಸ್ ಸಂಖ್ಯಾ ಬಲ ಹೆಚ್ಚಿಸದ ಸರಕಾರ ಮಾಶಾಸನಗಳು ಸರಿಯಾಗಿ ಬಾರದೇ ಕುಟುಂಬಗಳು ಬೀದಿ ಪಾಲಾಗಿ, ಅಗತ್ಯವಾಗಿ ಪೋಲಾಗುತ್ತಿದೆ ಸಾರ್ವಜನಿಕರ ಹಣ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಆರೋಪಿಸಿದ್ದಾರೆ.

ಸಾರ್ವಜನಿಕರಿಗೆ ಹೆಚ್ಚಿನ ಸುರಕ್ಷತೆ, ಭದ್ರತೆ ಮತ್ತು ತುರ್ತುಸ್ಪಂದನೆಯ ಸಲುವಾಗಿ ಪೊಲೀಸ್ ಇಲಾಖೆಯಿಂದ ಹೊಸದಾಗಿ ಪ್ರಾರಂಭಿಸಲಾಗಿರುವ 112 ಅಗತ್ಯ ಸೇವೆ ಯೋಜನೆಯ ಸಲುವಾಗಿ ಸರಕಾರದ ಬೊಕ್ಕಸದಿಂದ 12,89,79,155 ರೂ.ಗಳನ್ನು ವೆಚ್ಚ ಮಾಡಿರುವ ಅಂಶ ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ.ಈ ಯೋಜನೆಗೆ ಉಪಯೋಗಿಸುವ ಸಲುವಾಗಿ ಮಹೇಂದ್ರ ಸ್ಕಾರ್ಪಿಯೋ-ಎಸ್5 ಮಾದರಿಯ 114 ವಾಹನಗಳನ್ನು ಖರೀದಿಸಲಾಗಿದ್ದು, ಇದರ ಸಲುವಾಗಿ 12,12,79,155 ರೂ.ಗಳನ್ನು ಹಾಗೂ 11 ಬಜಾಜ್ ಪಲ್ಸರ್ ದ್ವಿಚಕ್ರ ವಾಹನಗಳನ್ನು ಖರೀದಿಸಲಾಗಿದ್ದು, ಇದರ ಸಲುವಾಗಿ 70,28,898 ರೂ,ಗಳನ್ನು ವೆಚ್ಚ ಮಾಡಿರುವ ಅಂಶವು ಅಧಿಕಾರಿಗಳು ನೀಡಿರುವ ದಾಖಲೆಯಿಂದ ತಿಳಿದು ಬಂದಿದೆ ಎಂದರು.

ಕೊರೋನಾ ರೋಗದಿಂದ ಇಡೀ ದೇಶದ ಆರ್ಥಿಕ ವ್ಯವಸ್ಥೆಯ ಕುಸಿದು ಹೋಗಿರುವ ಕಾರಣದಿಂದ ಸರಕಾರದಿಂದ ಪಡೆಯುವ ವಿವಿಧ ಮಾಶಾಸನಗಳನ್ನು ಅವಲಂಬಿಸಿಯೇ ಬದುಕು ಸಾಗಿಸುತ್ತಿರುವ ಸಾಕಷ್ಟು ಕುಟುಂಬಗಳು ನಾಲ್ಕೈದು ತಿಂಗಳು ಕಳೆದರೂ ಖಜಾನೆಯಿಂದ ಮಾಶಾಸನಗಳ ಹಣ ಬಿಡುಗಡೆಯಾಗದೇ ಇರುವುದರಿಂದ ಹೊಟ್ಟೆಗಿಲ್ಲದೇ ಉಪವಾಸ ಬಿಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಿರುವಾಗ ಸಾರ್ವಜನಿಕರಿಗೆ ಹೆಚ್ಚಿನ ಭದ್ರತೆ, ಸುರಕ್ಷತೆ ಮತ್ತು ತುರ್ತು ಸೇವೆಯ ಸಲುವಾಗಿ ಎಂದು ಸರಕಾರದ ಬೊಕ್ಕಸದಲ್ಲಿರುವ ಸಾರ್ವಜನಿಕರ ತೆರಿಗೆ ಹಣವನ್ನು ಈ ತೀತಿ ಪೋಲಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.ಅಗತ್ಯ ಸೇವೆಯ ಸಲುವಾಗಿಯೇ ಎಂದು ಖರೀದಿಸಲಾಗಿರುವ ಈ ವಾಹನಗಳ ಮೂಲ ಉದ್ದೇಶಕ್ಕೆ ಬಳಕೆಯಾಗದೇ ಸಾರ್ವಜನಿಕರ ವಾಹನಗಳನ್ನು ತಪಾಸಣೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇವುಗಳನ್ನು ಬಳಸಾಗುತ್ತಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸುವುದು ಅವಶ್ಯವಿದೆ ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಪ್ರತಿ 500 ಜನಸಂಖ್ಯೆಗೆ ಒಬ್ಬರು ಪೊಲೀಸರು ಇರಬೇಕೆಂದು ಸರಕಾರದ ನಿಯಮವಿದ್ದರೂ ಇಲ್ಲಿಯವರೆಗೆ ಆಗಿ ಹೋಗಿರುವ ಯಾವ ಸರಕಾರಗಳು ಕೂಡ ಹೆಚ್ಚಿನ ಪೊಲೀಸರ ನೇಮಕಾತಿಯ ಬಗ್ಗೆ ಚಿಂತನೆ ನಡೆಸಿರುವುದಿಲ್ಲ. ಹೀಗಾಗಿ ಈಗ ಅಂದಾಜು 2,500 ರಿಂದ 3 ಸಾವಿರ ಜನಸಂಖ್ಯೆಗೆ ಒಬ್ಬ ಪೊಲೀಸರು ಇರುವುದರಿಂದ ಸಾರ್ವಜನಿಕರು ನೀರಿಕ್ಷಿಸಿದ ಪ್ರಮಾಣದಲ್ಲಿ ಸರಿಯಾಗಿ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಸಾರ್ವಜನಿಕರ ಹಣವನ್ನು ಈ ರೀತಿಯಾಗಿ ಅನಗತ್ಯವಾಗಿ ಪೋಲಿ ಮಾಡುವುದನ್ನು ನಿಲ್ಲಿಸಿ ಜನಸಂಖ್ಯೆ ಆಧಾರದ ಮೇಲೆ ಪೊಲೀಸ್ ಸಂಖ್ಯಾ ಬಲ ಹೆಚ್ಚಿಸಲು ಖಾಯಂ ಪೊಲೀಸರ ನೇಮಕಾತಿಗೆ ಕ್ರಮ ಕೈಗೊಂಡರೆ ಮಾತ್ರ ಪೊಲೀಸ್ ಇಲಾಖೆಯಿಂದ ನೇಮಕಾತಿಗೆ ಕ್ರಮ ಕೈಗೊಂಡರೆ ಮಾತ್ರ ಪೊಲೀಸ್ ಇಲಾಖೆಯಿಂದ ರಾಜ್ಯದ ಜನತೆ ನೀರಿಕ್ಷಿಸಿದ ಪ್ರಮಾಣದಲ್ಲಿ ಸುರಕ್ಷತೆ, ಭದ್ರತೆ ಮತ್ತು ತುರ್ತು ಸ್ಪಂದನೆ ಸಿಗಲು ಸಾಧ್ಯವಾಗುತ್ತದೆ ಎಂದು ಒತ್ತಾಯಿಸಿದ್ದಾರೆ.