Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ಹಿರಿಯ ಪತ್ರಕರ್ತ ವಿಠ್ಠಪ್ಪ ಅಸ್ತಂಗತ

localview news

ಕೊಪ್ಪಳ : ಹಿರಿಯ ಪತ್ರಕರ್ತ, ಸಾಹಿತಿ, ನಾಟಕಕಾರ, ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಅವರು ಇಂದು ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 79 ವಯಸ್ಸಾಗಿತ್ತು ರಾಜ್ಯೋತ್ಸವ, ಮಾಧ್ಯಮ ಅಕಾಡೆಮಿ ಪುರಸ್ಕೃತರಾದ ಇವರಿಗೆ ಇಬ್ಬರು ಪುತ್ರರು, ಪತ್ನಿ ಅಗಲಿದ್ದಾರೆ. ಹಲವಾರು ಕೃತಿಗಳನ್ನು ರಚಿಸಿರುವ ವಿಠ್ಠಪ್ಪ ಲಂಕೇಶ, ಹಾಯ್ ಬೆಂಗಳೂರ್, ಸುದ್ದಿಮೂಲ ವರದಿಗಾರರಾಗಿದ್ದ ವಿಠ್ಠಪ್ಪ ಮೊನ್ನೆ ದಲಿತ ದಮನಿತರ ಹೋರಾಟದಲ್ಲಿ ಭಾಗಿಯಾಗಿದ್ದ ವಿಠ್ಠಪ್ಪ ನಿನ್ನೆ ಸಂಜೆ ಆಕಾಶವಾಣಿಯಲ್ಲಿ ಅವರ ಚಿಂತನೆ ಪ್ರಸಾರವಾಗಿತ್ತು ಜಿಲ್ಲಾ ಹೋರಾಟ, ಕುದರೆಮೋತಿ ಹೋರಾಟದಲ್ಲಿ ಪ್ರಮುಖ ಹೋರಾಟಗಾರರಾಗಿದ್ದ ಕೇವಲ 4 ನೆಯ ಓದಿರುವ ವಿಠ್ಠಪ್ಪ ಭಗವದ್ಗೀತೆ, ವೇದ ಉಪನಿಷತ್ತು ಆಳವಾಗಿ ಅಧ್ಯಯನ ಮಾಡಿರುವ ವಿಠ್ಠಪ್ಪ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ನಾಳೆ ಭಾಗ್ಯನಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.