ಪ್ರವಾಹ ಪೀಡಿತ ಸ್ಥಳಕ್ಕೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ
ಹುಕ್ಕೇರಿ : ತಾಲ್ಲೂಕಿನ ಉಳ್ಳಾಗಡಿ-ಖಾನಾಪುರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಪ್ರವಾಹ ಪೀಡಿತ ವಿವಿಧ ಗ್ರಾಮಗಳಿಗೆ ಪ್ರಿಯಾಂಕಾ ಜಾರಕಿಹೊಳಿ ಭಾನುವಾರ ಭೇಟಿ ನೀಡಿ, ಹಿರಣ್ಯಕೇಶಿ ನದಿಯಿಂದಾದ ಹಾನಿಯನ್ನು ವೀಕ್ಷಿಸಿದರು. ಯಮಕನಮರಡಿ ಮತಕ್ಷೇತ್ರದ ಚಿಕ್ಕಾಲಗುಡ್ಡ, ಕುರಣಿ, ಕೋಚರಿ, ಹೆಬ್ಬಾಳ, ಅರ್ಜನವಾಡ ಸೇರಿ ವಿವಿಧ ಗ್ರಾಮಗಳಿಗೆ ತೆರಳಿ ಅಲ್ಲಿನ ಜನರಿಗೆ ಆಗಿರುವ ಸಮಸ್ಯೆಯನ್ನು ಅವಲೋಕಿಸಿದರು. ಚಿಕ್ಕಾಲಗುಡ್ಡ ಗ್ರಾಮದ ಗಂಜಿ ಕೇಂದ್ರಕ್ಕೆ ತೆರಳಿ, ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಿದರು.
ನೆರೆ ಸಂತ್ರಸ್ತರಿಗೆ ಆಗಿರುವ ಹಾನಿಯ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಬಡವರಿಗೆ ಪರಿಹಾರ ದೊರೆಕಿಸಿ ಕೊಡಬೇಕೆಂದು ಪ್ರತಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಪಿಡಿಒ ಅಧಿಕಾರಿಗಳಿಗೆ ಪ್ರಿಯಾಂಕಾ ಜಾರಕಿಹೊಳಿ ಮನವಿ ಮಾಡಿಕೊಂಡರು.
ಗ್ರಾಪಂ.ಸದಸ್ಯ ರಾಜು ನಾಯಿಕ, ಪ್ರಕಾಶ ಬಸ್ಸಾಪುರಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾಂತೇಶ ಮಗದುಮ್ಮ, ಮಾಜಿ ಗ್ರಾಪಂ. ಉಪಾಧ್ಯಕ್ಷ ಹನಮಂತ ಶೇಖನವರ, ಪುಷ್ಪಗೌಡ ಪಾಟೀಲ, ಸುರೇಶ ಹುದ್ದಾರ, ಗಣೇಶಗೌಡ ಪಾಟೀಲ, ರಾಮಗೌಡ ಚೌಗಲ, ಪ್ರಭಾಕರ ಅನೋಜಿ, ಉತ್ತಮ ಕಾಂಬಳೆ, ಸಂಜು ಗಡರೋಳ್ಳಿ, ವಿನಯ ಪಾಟೀಲ, ಅಕ್ಷಯ ವೀರಮುಖ, ಕಾಂಗ್ರೆಸ್ ಮುಖಂಡರಾದ ಯಶವಂತ ನಾಯಿಕ, ಅರ್ಜುನ ಶೇಖನವರ ಸೇರಿದಂತೆ ಇತರರು ಇದ್ದರು.