Breaking
ಲೋಕಲವಿವ ತಾಲೂಕಾ ರಿಪೋರ್ಟರ 🎤ಆಗಲು ಬಯಸುವರು ಕ್ಲಿಕ್ ಮಾಡಿ    ಜಾಹೀರಾತಿಗಾಗಿ ಇಲ್ಲಿ ಕ್ಲಿಕ್ ಮಾಡಿ    

ದೇಶಕ್ಕಾಗಿ ಹೋರಾಡಿದ ವೀರ ಪುತ್ರರನ್ನು ಇಡೀ ದೇಶವೇ ಸ್ಮರಿಸುತ್ತಿದೆ: ಡಿವೈಎಸ್ ಪಿ ಶಿವಾನಂದ ಕಟಗಿ

localview news

ಬೈಲಹೊಂಗಲ: ಕಾರ್ಗಿಲ್‌ ಆಪರೇಷನ್‌ ವಿಜಯಕ್ಕೆ 22 ವರ್ಷ ಪೂರ್ಣಗೊಂಡಿದ್ದು, ಪಾಕಿಸ್ಥಾನದ ವಿರುದ್ಧ ವಿಜಯ ಪತಾಕೆ ಹಾರಿಸಿದ ಭಾರತ ಮಾತೆಯ ವೀರ ಪುತ್ರರನ್ನು ಇಡೀ ದೇಶವೇ ಸ್ಮರಿಸುತ್ತಿದೆ ಎಂದು ಬೈಲಹೊಂಗಲ ಡಿವಾಯ್ಎಸ್ಪಿ ಶಿವಾನಂದ ಕಟಗಿ ಹೇಳಿದರು.

ಪಟ್ಟಣದ ವೀರಮಾತೆ ಚೆನ್ನಮ್ಮ‌ರಸ್ತೆಯ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಮಲಪ್ರಭಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಹಾಗೂ ಸೈನಿಕರ ಸತ್ಕಾರ ಕಾರ್ಯಕ್ರಮ ಉದ್ಘಾಟನೆಗೊಳಿಸಿ ಮಾತನಾಡಿ, ದೇಶದ ಒಳಗಿರುವ ಆತಂಕವಾದಿಗಳನ್ನು ಮಟ್ಟಹಾಕುವಲ್ಲಿ ತೊರುವ ಧೈರ್ಯಕ್ಕಿಂತ ಗಡಿಯಲ್ಲಿ ಶತೃವಿನ ಗುಂಡಿಗೆಗೆ ಎದೆಕೊಟ್ಟು ದೇಶದ ಪ್ರಜೆಗಳನ್ನ ಕಾಪಡುತ್ತಿರುವ ಸೈನಿಕರ ಸೇವೆ ಯಾರು ಮರೆಯುವಂತಿಲ್ಲ ಎಂದರು.

ತಹಶಿಲ್ದಾರ ಬಸವರಾಜ ನಾಗರಗಾಳ ಮಾತನಾಡಿ, ಕಾರ್ಗಿಲ್‌ ಯುದ್ಧದ ವಿಜಯದ ದಿವಸವನ್ನು ನಮ್ಮ ವೀರ ಯೋಧರ ನೆನಪಲ್ಲಿ ಪ್ರತಿ ವರ್ಷವೂ ದೇಶವಾಸಿಗಳು ವಿಜಯ ದಿವಸವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ದ್ರಾಸ್‌ನ ಕಾರ್ಗಿಲ್‌ ಯುದ್ಧ ಸ್ಮಾರಕದಲ್ಲಿ ವಿಜಯ ದಿವಸ ಆಚರಣೆ ಮಾಡಿ ಈ ಯುದ್ದದಲ್ಲಿ ಮಡಿದ 527 ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ ಎಂದರು.

ನ್ಯಾಯವಾದಿ ಹಾಗೂ ಮಲಪ್ರಭಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಪ್ರಸ್ಥಾವಿಕವಾಗಿ ಮಾತನಾಡಿ, ಪಾಕ್‌ ಕುತಂತ್ರದಿಂದ 1999 ಮೇ 3ರಿಂದ ಪಾಕಿಸ್ತಾನದ ಜತೆ ಸಂಘರ್ಷ ಆರಂಭವಾಗಿ 1999 ಜು.26ರಂದು ಆಪರೇಷನ್‌ ವಿಜಯ್‌ ದೊಂದಿಗೆ ಅಂತ್ಯವಾಗಿ ಗೆಲುವು ಸಾಧಿಸಿದ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ್‌ ಎಂದು ಪ್ರತಿ ವರ್ಷ ಸ್ಮರಣೆ ಮಾಡಿಕೊಳ್ಳಲಾಗುತ್ತಿದೆ.

ಕಾರ್ಗಿಲ್‌ ಯುದ್ಧದಲ್ಲಿ ಭಾರತ ಜಯಿಸಿ ಸೋಮವಾರಕ್ಕೆ 22ವರ್ಷ ಸಂದಿದೆ. -48ಡಿಗ್ರಿ ಶೀತದ ಸಿಯಾಚಿನ್‌ ನೀರ್ಗಲ್ಲು ಪ್ರದೇಶದಿಂದ ಭಾರತೀಯ ಸೈನಿಕರು ಕಾಲ್ಕೀಳುವಂತೆ ಮಾಡಿ ಕಾರ್ಗಿಲ್ ಪ್ರದೇಶವನ್ನು ಅಕ್ರಮ ಮಾಡಿಕೊಳ್ಳುವ ಉದ್ದೇಶದಿಂದ ಪಾಕ್‌ನ ಯೋಜನೆಯಾಗಿತ್ತು. ಇದನ್ನು ವಿಫಲಗೊಳಿಸಿ ವಿಜಯ ಕಲ್ಪಿಸಿಕೊಟ್ಟ ವೀರಯೋಧರನ್ನು ಪ್ರತಿ ಕ್ಷಣದಲ್ಲು ಸ್ಮರಿಸಬೇಕು. ಈ ಉದ್ದೇಶದಿಂದ ಪ್ರತಿ ವರ್ಷ ವೀರ ಸೈನಿಕರನ್ನ ಕರೆದು ಸತ್ಕರಿಸುವ ಪದ್ದತಿ ಯನ್ನು ವೀರ ಚೆನ್ನಮ್ಮನ ಐಕ್ಯ ಸ್ಥಾನ ರಾಯಣ್ಣನ ಕ್ರಾಂತಿಯ ನಾಡು ಬೈಲಹೊಂಗಲದಲ್ಲಿ ಆಚರಿಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾದ, ಸೈನಿಕರಾದ ಸಿದ್ದಪ್ಪ ಖನಗಾರ, ಮಂಜುನಾಥ ಕಾದ್ರೊಳ್ಳಿ, ಮಲ್ಲನಗೌಡ ಪಾಟೀಲ, ಸದಾಶಿವ ಪೂಜಾರ, ಬಸವರಾಜ ಕಾಜಗಾರ, ಶ್ರೀಕಾಂತ್ ಮೆಳ್ಳಯ್ಯನವರ, ಶರಣಬಸಯ್ಯ ಹೀರೆಮಠ, ವೀರು ದೊಡ್ಡವೀರಪ್ಪನವರ ತಮ್ಮ ಸೇವ ಅನುಭವ ಹಂಚಿಕೊಂಡರು. ಸಂಸ್ಥೆಯ ಪ್ರಾ. ಡಾ.ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು.

ಮಮದಾಪೂರದ ಮೌನ ಮಲ್ಲಿಕಾರ್ಜುನ ಮಠದ ಪೂಜ್ಯರು ಸಾನಿಧ್ಯವಹಿಸಿ ವೀರ ಯೋಧರಿಗೆ ಆರ್ಶಿವದಿಸಿದರು. ಕಾರ್ಯಕ್ರಮದಲ್ಲಿ ಭಾರತೀಯ ಯೋಧರಾದ ಬಸಪ್ಪ ಚಂದರಗಿ, ಭೀಮರಾವ ಕಾಗಿಹಾಳ, ಈರಯ್ಯ ಚಿಕ್ಕಮಠ,ಮಹೇಶ ಕುಮಾರನಾಯ್ಕ, ಬಾಳಪ್ಪ ಹುದಲಿ, ಸುರೇಶ ಈಟ್ಟನ್ನವರ, ವಿಠಲ ಆವೋಜಿ, ಅಪ್ಪಯ್ಯ ಕಾಳಚರಂತಿಮಠ, ವಿಠಲ ಬರದೇಲಿ, ನಾಗಪ್ಪ ಗುಂಡ್ಲೂರ,ಶಾಂತಪ್ಪ ಗೊಡಚಿ, ನಾಗಪ್ಪ ಸವದತ್ತಿ, ವೀರಭದ್ರಪ್ಪ ಕುಂಬಾರ, ಸಂಜಿವ ಹಂಚಿನಮನಿ, ಸುಖದೇವಾನಂದ ಮುಂತಾದ ಸೈನಿಕರನ್ನ ಈ ಸಂದರ್ಭದಲ್ಲಿ ನೆನಪಿನ ಕಾಣಿಕೆ ನೀಡಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಬಸವರಾಜ ದುಗ್ಗಾಣಿ, ಶಿವು ಮುನೇಶ್ವರಮಠ, ಮೊದಿ ಟೀ ಬಸಲಿಂಗಪ್ಪ ಹನಸಿ, ಮಲ್ಲಿಕಾರ್ಜುನ ಕರಡಿಗುದ್ದಿ, ಈರಣ್ಣ ಸುಳ್ಳದ, ಬಸವರಾಜ ಗೋಕಾವಿ, ಸಂಗಪ್ಪ ಮುನವಳ್ಳಿ, ಶಾಂತಿನಾಥ ಗಿಡಕ್ಕನವರ, ಶಿವು ಮಾಕಿ, ಈರಣ್ಣ ಹುರಳಿ, ಮುನೀರ ಶೇಖ, ಸಿದ್ದಪ್ಪ ಗುಳನ್ನವರ, ಸುರೇಶ ಹೊಳಿ, ಶ್ರೀಪತಿ ಪಠಾಣಿ, ಮಹಾದೇವ ಕಲಭಾಂವಿ, ಮಡಿವಾಳಪ್ಪ ಬುಳ್ಳಿ, ಕುಮಾರ ಹೂಗಾರ, ಗೌಡಪ್ಪ ಹೊಸಮನಿ, ಮಲ್ಲಿಕಾರ್ಜುನ ವಕ್ಕುಂದ, ಸುನೀಲ ಹುಲಮನಿ, ಮಲ್ಲಿಕಾರ್ಜುನ ಕಮತಗಿ, ಮನೋಜ ಹುಗ್ಗಿ ಮುಂತಾದವರು ಇದ್ದರು.

ಉಪನ್ಯಾಸಕ ಎಸ್.ಕೆ.ಮೆಳ್ಳಿಕೇರಿ ಸ್ವಾಗತಿಸಿದರು, ವಿದ್ಯಾರ್ಥಿ ಮುಖಂಡ ಸಿದ್ದಾರೋಢ ಹೊಂಡಪ್ಪನವರ ನಿರೂಪಿಸಿದರು ಐಟಿ ಉದ್ಯೋಗಿ ಸೋಮು ವಣ್ಣುರ ವಂದಿಸಿದರು.