ಸಂಬಳ, ಪಿಂಚಣಿ, ಇಎಂಐ ಪಾವತಿಗಳ ಮೇಲೆ ಹೊಸ ನಿಯಮ ಜಾರಿಗೆ ತಂದ ಆರ್.ಬಿ.ಐ
ಮುಂಬೈ:ಆಗಸ್ಟ್ 1 ರಿಂದ, ಏನ್.ಎ.ಸಿ.ಎಚ್ ಎಲ್ಲಾ ದಿನಗಳಲ್ಲಿ ಸಕ್ರಿಯಗೊಳ್ಳುಲು ನಿರ್ಧರಿಸಿದೆ ಎಂದು ಆರಬಿಐ ತಿಳಿಸಿದೆ.ಇದರರ್ಥ ನಿಮ್ಮ ಯುಟಿಲಿಟಿ ಬಿಲ್ಗಳು, ಇ. ಎಂ.ಐ, ಎಸ್.ಐ.ಪಿ, ಇತ್ಯಾದಿಗಳನ್ನು ಶನಿವಾರ ಮತ್ತು ಭಾನುವಾರ ಅಥವಾ ಯಾವುದೇ ರಜಾ ದಿನಗಳಲ್ಲಿ ಡೆಬಿಟ್ ಮಾಡಲಾಗುತ್ತದೆ.
ನಿಮ್ಮ ಖಾತೆಗಳಲ್ಲಿ ಸರಿಯಾದ ಬ್ಯಾಲೆನ್ಸನ್ನು ಇರಿಸಿ ಇಲ್ಲವಾದಲ್ಲಿ ದಂಡ ಬೀದ್ದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಆಗಸ್ಟನಿಂದ್ ನಿಮ್ಮ ಸಂಬಳವನ್ನು ಭಾನುವಾರ ಮತ್ತು ಗೆಜೆಟೆಡ್ ರಜಾದಿನಗಳಲ್ಲಿ ಜಮಾ ಮಾಡಲಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (NACH) ವಾರದ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಘೋಷಿಸಿದೆ, ಗ್ರಾಹಕರ ಅನುಕೂಲತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ ಎಂದು RBI ಗವರ್ನರ್ ಶಕ್ತಿಕಾಂತ ದಾಸ್ ಘೋಷಿಸಿದ್ದಾರೆ.
ಏನಿದು NACH...?
ನ್ಯಾಷನಲ್ ಪೇಮೆಂಟ್ಸ್ ಕಾರ್ಪ್ ಆಫ್ ಇಂಡಿಯಾ (NACH), ಡಿವಿಡೆಂಡ್, ಬಡ್ಡಿ, ಸಂಬಳ ಮತ್ತು ಪಿಂಚಣಿ ಪಾವತಿಯಂತಹ ಒಂದರಿಂದ ಹಲವು ಕ್ರೆಡಿಟ್ ವರ್ಗಾವಣೆಗಳ ಸೌಲಭ್ಯ ಒದಗಿಸುತ್ತದೆ. ಇದು ವಿದ್ಯುತ್, ಗ್ಯಾಸ್, ಟೆಲಿಫೋನ್, ಸಾಲಗಳ ಕಂತು, ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮತ್ತು ವಿಮಾ ಕಂತುಗಳಿಗೆ ಸಂಬಂಧಿಸಿದ ಪಾವತಿಗಳ ಸಂಗ್ರಹವನ್ನು ಸಹ ಸುಗಮಗೊಳಿಸುತ್ತದೆ.
ಪ್ರಸ್ತುತ, NACH ಸೌಲಭ್ಯವು ಬ್ಯಾಂಕ್ ಕೆಲಸದ ದಿನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಬ್ಯಾಂಕ್ ರಜೆ, ಗೆಜೆಟೆಡ್ ರಜಾದಿನಗಳು ಮತ್ತು ಭಾನುವಾರಗಳಲ್ಲೂ ಸ್ವಯಂ ಡೆಬಿಟ್ಗಳನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ.
ಗ್ರಾಹಕರ ಅನುಕೂಲತೆಯನ್ನು ಮತ್ತಷ್ಟು ಹೆಚ್ಚಿಸಲು ಮತ್ತು 24 × 7 ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ (RTGS) ಲಭ್ಯತೆಯನ್ನು ಸದುಪಯೋಗಪಡಿಸಿಕೊಳ್ಳಲು, NACH ವಾರದ ಎಲ್ಲಾ ದಿನಗಳಲ್ಲಿ ಪರಿಣಾಮಕಾರಿಯಾಗಿ ಲಭ್ಯವಾಗುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದು ಆರಬಿಐ ತಿಳಿಸಿದೆ.