ಕೆಪಿಎಲನಲ್ಲಿ ಕ್ರಿಕೆಟ್ ಆಡುವ ಕ್ರಿಕೆಟಿಗರಿಗೆ ಬಿಸಿಸಿಐನಿಂದ್ ಖಡಕ್ ವಾರ್ನಿಂಗ್
ದೆಹಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಕಾಶ್ಮೀರ ಪ್ರೀಮಿಯರ್ ಲೀಗ್ನಲ್ಲಿ (KPL)ಭಾಗವಹಿಸುತ್ತಿರುವ ಕ್ರಿಕೆಟಿಗರು ಭಾರತದಲ್ಲಿ ಯಾವುದೇ ಲೀಗ್ಗಳಲ್ಲಿ ಆಡುವುದನ್ನು ಅಥವಾ ಬಿಸಿಸಿಐನೊಂದಿಗೆ ಯಾವುದೇ ವಾಣಿಜ್ಯ ಸಂಪರ್ಕವನ್ನು ಹೊಂದಿರುವುದನ್ನು ನಿರ್ಬಂಧಿಸಲಾಗುತ್ತದೆ, ಅವರು ಭಾರತದಲ್ಲಿ ಯಾವುದೇ ಕ್ರಿಕೆಟ್ ಸಂಬಂಧಿತ ಕೆಲಸದಲ್ಲಿ ಭಾಗಿಯಾಗಿರಲು ಸಾಧ್ಯವಿಲ್ಲ ಎಂದು ಬಿಸಿಸಿಐ ಖಡಕ್ ವಾರ್ನಿಂಗ್ ನೀಡಿದೆ.
ಇದಕ್ಕೆ ದಿಗ್ಬ್ರಮೆಗೊಂಡ ಪಾಕಿಸ್ತಾನ ಕ್ರಿಕೆಟ್ ಬೋರ್ಡ್
ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅನೇಕ ಐಸಿಸಿ ಸದಸ್ಯರನ್ನು ಕರೆಸಿಕೊಂಡು ಕಾಶ್ಮೀರ ಪ್ರೀಮಿಯರ್ ಲೀಗ್ನಿಂದ ತಮ್ಮ ನಿವೃತ್ತ ಕ್ರಿಕೆಟಿಗರನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ.
ಬಿಸಿಸಿಐ ತನ್ನ ನಿವೃತ್ತ ಕ್ರಿಕೆಟಿಗರನ್ನು ಕಾಶ್ಮೀರ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸುವುದನ್ನು ನಿಲ್ಲಿಸುವಂತೆ ಅನೇಕ ಐಸಿಸಿ ಸದಸ್ಯರಿಗೆ ಎಚ್ಚರಿಕೆ ನೀಡಿದೆ ಎಂದು ಪಾಕ್ ಕ್ರಿಕೆಟ್ ಬೋರ್ಡ್ ಬರೆದುಕೊಂಡಿದೆ.